ಮಲೇಬೆನ್ನೂರು, ಜ. 29- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ಜರುಗಲಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಶ್ರೀಮಠದಲ್ಲಿ ಮಂಗಳವಾರ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಗಂಬ ಪೂಜೆ ನೆರವೇರಿಸುವ ಮೂಲಕ ಜಾತ್ರೆಯ ಸಿದ್ಧತೆಗಳಿಗೆ ನಿನ್ನೆ ಚಾಲನೆ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಮಠದ ಧರ್ಮದರ್ಶಿಗಳಾದ ಶ್ರೀಮತಿ ಶಾಂತಲಾ
ರಾಜಣ್ಣ, ನಲುವಾಗಲು ನಾಗರಾಜಪ್ಪ, ಕೆ.ಬಿ. ಮಂಜುನಾಥ್, ಜಿ.ಪಂ. ಮಾಜಿ ಸದಸ್ಯ ಹೊದಿಗೆರೆ ರಮೇಶ್, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ತಿಮ್ಮೇನಹಳ್ಳಿ ಚಂದ್ರಪ್ಪ, ನಿವೃತ್ತ ಅಧಿಕಾರಿ ಮಾರಪ್ಪನಾಯಕ, ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ಪರಶುರಾಮಪ್ಪ, ಗ್ರಾ.ಪಂ. ಸದಸ್ಯ ನಾಗೇಂದ್ರ, ನಿವೃತ್ತ ಶಿಕ್ಷಕರಾದ ಜಿಗಳಿಯ ಜಿ.ಆರ್. ನಾಗರಾಜ್, ವಾಸನ ಮಹಾಂತೇಶ್, ಹರಿಹರ ತಾ. ಗ್ರಾ. ಜಾತ್ರಾ ಸಮಿತಿ ಅಧ್ಯಕ್ಷ ಕೆ. ಬೇವಿನಹಳ್ಳಿ ಹಾಲೇಶ್, ಹರಿಹರ ನಗರ ಜಾತ್ರಾ ಸಮಿತಿ ಅಧ್ಯಕ್ಷೆ ಪಾರ್ವತಿ ಬೋರಯ್ಯ, ಮಹಿಳಾ ಮುಖಂಡರಾದ ವಿಜಯಶ್ರೀ ಮಹೇಂದ್ರಕುಮಾರ್, ಗೌರಮ್ಮ ಮಂಜುನಾಥ್ ಚೀಲೂರು, ಹರಿಹರ ನಗರ ನಾಯಕ ಸಮಾಜದ ಅಧ್ಯಕ್ಷ ಮಕರಿ ಪಾಲಾಕ್ಷಪ್ಪ, ರಾಣೇಬೆನ್ನೂರು ತಾ. ನಾಯಕ ಸಮಾಜದ ನದಿ ಹರಳಹಳ್ಳಿ ಬೇಡರ ಚಂದ್ರಪ್ಪ, ರಾಜನಹಳ್ಳಿ ಭೀಮಣ್ಣ, ಹನುಮಂತಪ್ಪ, ಕೊಂಡದಹಳ್ಳಿ ಜಯಣ್ಣ, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.