ದಾವಣಗೆರೆ, ಜ.27- ಧ.ರ.ಮ ವಿಜ್ಞಾನ ಕಾಲೇಜಿನ ಎನ್.ಸಿ.ಸಿ ಹಾಗೂ ಎನ್ನೆಸ್ಸೆಸ್ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ಯ ಜಾಥಾ ಹಾಗೂ ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಜೀಬ್ರಾ ಪಟ್ಟಿಗಳನ್ನು ಹಾಕಿ, ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ. ರೂಪಶ್ರೀ, ಎನ್ನೆಸ್ಸೆಸ್ ಅಧಿಕಾರಿ ಚನ್ನಬಸವರಾಜ್ ಕೆಂಚಪ್ಪನವರ್, ಡಾ.ಮಂಜುನಾಥ್, ಮುರಿಗೇಂದ್ರಪ್ಪ, ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಶೈಲಜಾ, ಬಸವರಾಜ್ ಹಾಗೂ ಇತರರು ಇದ್ದರು.
ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಮಾಸಾಚರಣೆ
