ಸರ್ಕಾರದ ಧೋರಣೆಯಿಂದ ಪರಿತಪಿಸುತ್ತಿರುವ ಮಧ್ಯಮ ವರ್ಗದ ಜನರು

ಸರ್ಕಾರದ ಧೋರಣೆಯಿಂದ ಪರಿತಪಿಸುತ್ತಿರುವ ಮಧ್ಯಮ ವರ್ಗದ ಜನರು

ದಾವಣಗೆರೆ,ಜ.27- ರಾಜ್ಯ ಸರ್ಕಾರದ ಧೋ ರಣೆಯಿಂದಾಗಿ ಜನ ಸಾಮಾನ್ಯರು  ಅದರಲ್ಲಿಯೂ ಮಧ್ಯಮ ವರ್ಗದ ಜನ  ಪರಿತಪಿಸುವಂತಾಗಿದೆ ಎಂದು   ಹಿರಿಯ ಮುಖಂಡ ಜೆ.ಸೋಮನಾಥ್ ಟೀಕಿಸಿದ್ದಾರೆ.

ಚುನಾವಣೆ ವೇಳೆ ಜನತೆಗೆ ನೀಡಿದ ಆಶ್ವಾಸನೆಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು,  ಪಂಚ ಗ್ಯಾರಂಟಿಗಳಿಗೂ ಹಣ ಒದಗಿಸುವಲ್ಲಿ  ಪರದಾಡುವಂತಾಗಿದೆ. ಹಾಗಾಗಿ ಸಾಮಾನ್ಯ ಜನರ ಮೇಲೆ ಇಲ್ಲ-ಸಲ್ಲದ ಹೊರೆಯನ್ನು ಹಾಕುವ ಮೂಲಕ, ಒಂದು ಕೈಯಲಿ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. 

ಶ್ರೀಮಂತರೇನೋ ಬದುಕುತ್ತಾರೆ. ಆದರೆ ಬಡ  ಮಧ್ಯಮ ವರ್ಗದ ಜನರ ಸ್ಥಿತಿ ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತಾಗಿದೆ ಎಂದು ಅವರು ಹೇಳಿದ್ದಾರೆ. 

error: Content is protected !!