ಮಲೇಬೆನ್ನೂರು, ಜ.27- ಸಮೀಪದ ಇಂಗಳಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಟನ್ ನಷ್ಟು ಮರಳನ್ನು ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕವಿತಾ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಲೇಬೆನ್ನೂರು ಪಿಎಸ್ಐ ಪ್ರಭು ಡಿ.ಕೆಳಗಿನಮನಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿ ಕಾರಿ ಮಂಜುಳಾ ಮತ್ತು ಪೊಲೀಸ್ ಸಿಬ್ಬಂದಿ ಈ ವೇಳೆ ಇದ್ದರು.
ಇಂಗಳಗೊಂದಿ ಬಳಿ ಅಕ್ರಮ ಮರಳು ವಶ
