ಹೆಣ್ಣು ಮಕ್ಕಳ ಹಕ್ಕುಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ

ಹೆಣ್ಣು ಮಕ್ಕಳ ಹಕ್ಕುಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ

ಹರಿಹರದಲ್ಲಿ ಡಾ|| ರವಿಕುಮಾರ್

ಹರಿಹರ, ಜ. 27- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂದು ಆರೈಕೆ ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆ,  ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೆಬಲ್ ಕಿಡ್ಸ್ ಪ್ರಿ – ಸ್ಕೂಲ್ ಮತ್ತು ಡೇ ಕೇರ್, ಹರಿಹರದಲ್ಲಿ ಇಂದು ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಡಾ|| ಟಿ. ಜಿ. ರವಿಕುಮಾರ್ ಮಾತನಾಡಿ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ದಿನದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರು ವುದು  ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಇಂದು ಸಮಾಜದ ಎಲ್ಲ ರಂಗಗಳಲ್ಲಿ ಹೆಣ್ಣು ಮಕ್ಕಳು ಪೈಪೋಟಿಯನ್ನು ಎದುರಿಸಿ ಉನ್ನತ ಸ್ಥಾನಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಅವರೂ ಸಮಾನವಾದ ಹಕ್ಕುಗಳು ಪಡೆಯುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಎಲ್ಲರಿಗೂ ಸಮಾನವಾದ ಆರೋಗ್ಯ ಸೌಲಭ್ಯ ದೊರೆಯಬೇಕು ಎಂದು ತಿಳಿಸಿ, ಇದರ ಬಗ್ಗೆ ಪ್ರೀತಿ ಆರೈಕೆ ಟ್ರಸ್ಟ್‌ನ ವತಿಯಿಂದ ನಡೆಯುವ ಪ್ರತಿ ಆರೋಗ್ಯ ಶಿಬಿರದಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆಯಲ್ಲಿ  ಪ್ರಾಂಶುಪಾಲರಾದ ನಾಗಶ್ರೀ ಹಾಗೂ ತಿಮ್ಮಯ್ಯ ಶೆಟ್ರು,  ಉದ್ಯಮಿಗಳಾದ ನಾಗರಾಜ್ ಸ್ವಾಮಿ ಉಪಸ್ಥಿತರಿದ್ದರು.

error: Content is protected !!