ದಾವಣಗೆರೆ, 27.ಜ- ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾ ಡೆಮಿ ವತಿಯಿಂದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಬಾತಿ ಗುಡ್ಡದಲ್ಲಿ ಚಾರಣ ಮಾಡುವುದರ ಮೂಲಕ ಬೆಟ್ಟದ್ದ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದರೊಂದಿಗೆ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಪರಿಸರ ಮತ್ತು ಚಾರಣ ಪ್ರಿಯರ ಆಶಯ ದಂತೆ ಪರಿಸರದಲ್ಲಿ ಚಾರಣ ಮಾಡುವುದರೊಂದಿಗೆ ಬೆಟ್ಟ, ಗುಡ್ಡ ಹತ್ತಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಕೊಟ್ರೇಶ, ಚಾರಣ ಪ್ರಿಯರಾದ ರಾಜನಹಳ್ಳಿ ಶಿವಕುಮಾರ್, ಸಂತೋಷ, ತೇಜಸ್ವಿನಿ, ಹನುಮಂತ್, ಚಂದ್ರು ಮೊಳ್ಳಿ, ಸುರೇಶ್ ಗೌಡ್ರು, ಶಿವಕುಮಾರ್ ದೇವರೆಡ್ಡಿ, ಶಂಕರ್ ಗೌಡ ಬಿರಾದಾರ್, ಸಾಗರ್, ಕು.ಚೇತನ್, ಸನ್ನಿಧಿ, ಸಮರ್ಥ ಇನ್ನು ಮುಂತಾದವರು ಚಾರಣದಲ್ಲಿ ಭಾಗವಹಿಸಿದ್ದರು.