ದಾವಣಗೆರೆ, ಜ.27- ನಮನ ಅಕಾಡೆಮಿ ಸಂಸ್ಥಾಪಕ ಕಾರ್ಯದರ್ಶಿ ಡಿ.ಕೆ ಮಾಧವಿ ಅವರಿಗೆ `2025ರ ಏಷಿಯಾ ಪೆಸಿಫಿಕ್ ಐಕೋನಿಕ್ ಅವಾರ್ಡ್’ ಲಭಿಸಿದೆ.
ಭರತನಾಟ್ಯ ಕಲೆಯನ್ನು ಭಾರತ ಮಾತ್ರವಲ್ಲದೇ, ಜಾಗತೀಕ ಮಟ್ಟದಲ್ಲಿ ಪ್ರಸಾರ ಮಾಡುವಲ್ಲಿ ಯಶಸ್ಸು ಸಾಧಿಸಿರುವುದು ಮತ್ತು ಕಲಾ ಪ್ರಪಂಚದಲ್ಲಿ ಮಾಧವಿ ಅವರು ಮಾಡಿದ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ `ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್‌ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಫೀಸ್ ಫೌಂಡೇಶನ್’ ಈ ಪ್ರಶಸ್ತಿಯನ್ನು ನೀಡಿದೆ. ಇಂಡೋನೇಷಿಯಾದ ಬಾಲಿಯ ಏಸ್ಟಿನ್ ಕಾನ್ಫರೆನ್ಸ್ ಹಾಲ್‌ನಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.