ರಂಗಭೂಮಿ, ಜನರ ಮನ ಪರಿವರ್ತನೆ ನೀಡಿ ಬದುಕಿಗೆ ಮೌಲ್ಯ, ಜವಾಬ್ದಾರಿ ತರುತ್ತದೆ

ರಂಗಭೂಮಿ, ಜನರ ಮನ ಪರಿವರ್ತನೆ  ನೀಡಿ ಬದುಕಿಗೆ ಮೌಲ್ಯ, ಜವಾಬ್ದಾರಿ ತರುತ್ತದೆ

ಹಿರಿಯ ಪತ್ರಕರ್ತ – ರಂಗಕರ್ಮಿ ಬಸವರಾಜ ಐರಣಿ

ದಾವಣಗೆರೆ, ಜ. 27- ಜನಮಾನಸದಲ್ಲಿ ಮೌಲ್ಯಗಳನ್ನು ಬಿತ್ತಿ ವಿಕಾಸದ ಬೆಳಕನ್ನು ತೋರುವ ರಂಗಭೂಮಿ, ಜನರ ಮನ ಪರಿವರ್ತನೆ ಹಾಗೂ ಸಮಾಜ ಸುಧಾರಣೆಗೆ ಪ್ರೇರಣೆ ನೀಡಿ ಬದುಕನ್ನು ಹಸನಾಗಿಸುತ್ತದೆ. ಶಿಸ್ತು, ಶ್ರದ್ಧೆ, ಕ್ರಿಯಾಶೀಲತೆ ಹಾಗೂ ಜವಾಬ್ದಾರಿಯ ಕಾರ್ಯ ನಿರ್ವಹಣೆಯನ್ನು ಕಲಿಸುತ್ತದೆ ಎಂದು ಹಿರಿಯ ಪತ್ರಕರ್ತ – ರಂಗಕರ್ಮಿ ಬಸವರಾಜ ಐರಣಿ ತಿಳಿಸಿದರು.

ಹುಬ್ಬಳ್ಳಿ ನಗರದ ರಂಗರೇಖಾ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ `ಅಲ್ಲಮ ಜಗದ ಜಂಗಮ’ ಅರ್ಥಾತ್ `ಮಾಯೆಯ ಸೋಲು’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. 

 ರಂಗಾಯಣ ಮಾಜಿ ನಿರ್ದೇಶಕ ಸುಭಾಷ್ ನರೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕವಿಗಳಾದ ಸಾಧು ಎಸ್. ಕಠಾರೆ, ವೀಣಾ ಅತಾವಲೆ, ಮನೀಷ ಶಿಂಧೆ,  ಸಿದ್ದರಾಮಪ್ಪ ಶಿವಳ್ಳಿ, ರೂಪಾ ಜೋಶಿ, ಮಂಜುನಾಥ ಕಲಾಲ್‌, ಗುರುಸಿದ್ದಪ್ಪ ಎಂ. ಬಡಿಗೇರ, ಅನ್ನಪೂರ್ಣ ಉಂಡಿ, ವಿ.ಜಿ. ಪಾಟೀಲ, ರಾಮು ಮೂಲಗಿ, ವಾಗೀಶ್ ಭಿಕ್ಷಾವರ್ತಿ ಮಠ ಉಪಸ್ಥಿತರಿದ್ದರು,

 ನಾಟಕ ರಚನೆ ಸಾಧು ಎಸ್. ಕಠಾರೆ, ಕವಿಗಳು,   ಬಸವರಾಜ ಚಕ್ರಸಾಲಿ ಅವರು ನಾಟಕ ನಿರ್ದೇಶಿಸಿ ಅಲ್ಲಮನ ಪಾತ್ರ ವಹಿಸಿದ್ದರು. ಸಂಗೀತ ನಿರ್ದೇಶನ ತುಕಾರಾಮ ಕಠಾರೆ, ನೃತ್ಯ ನಿರ್ದೇಶನ ಮನೀಷ ಶಿಂದೆ, ವಾದ್ಯ ವೃಂದ ಮಂಜುನಾಥ ಇಂಗಳಳ್ಳಿ, ಹಿನ್ನೆಲೆ ಗಾಯಕರಾಗಿ ದೀಪಾ ಪತ್ತಾರ, ಬೆಳಕು  ಪ್ರಕಾಶ ಉಳ್ಳಾಗಡ್ಡಿ, ವೀರಪ್ಪ ಕಂದಕೂರ, ಹಾಗೂ ಪ್ರಸಾದನ :  ಸಂಜಯ ಭುಜಂಗ ಸಂಗಡಿಗರು, ಎಲ್ಲ ಪಾತ್ರಧಾರಿಗಳು ಸಮರ್ಪಕವಾಗಿ ಅಭಿನಯಿಸಿ ನಾಟಕಕ್ಕೆ ಕಳೆ ಕಟ್ಟಿದರು. ಅಲ್ಲದೇ, ನಾಟಕವು ನೋಡುಗರನ್ನು ಭಕ್ತಿ ಭಾವದತ್ತ ಕೊಂಡೊಯ್ದು ಯಶಸ್ವೀ ಪ್ರದರ್ಶನ ಕಂಡಿತು.

error: Content is protected !!