ದಾವಣಗೆರೆ, ಜ. 26 – ಕಲುಬುರ್ಗಿಯಲ್ಲಿ ಕಳೆದ ವಾರ ನಡೆದ 6ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ನಗರದ ಕಿಡ್ಸ್ ಅಬಾಕಸ್ ಸೆಂಟರ್‌ನ 7 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸೂಪರ್ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾರೆ. ಚಂದನ್ ಎಸ್. ಪ್ರಥಮ ರನ್ನರ್ ಅಪ್, ಮೇಘರಾಜ್ ಎಸ್. ಎರಡನೇ ರನ್ನರ್ ಅಪ್ ಮತ್ತು ಜಸ್ರಾಜ್ ಡಿ.ಪಿ. ಲಿಖಿತ್ ಡಿ.ಆರ್., ಹರ್ಷ ಬಣಕಾರ್ ಹಾಗೂ ದೀಕ್ಷಾ ಹೆಚ್.ಎಸ್. ವಿದ್ಯಾರ್ಥಿಗಳು ಮೂರನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ.
ವಿದ್ಯಾರ್ಥಿಗಳಗೆ, ಪಾಲಕರಿಗೆ, ಕಿಡ್ಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಲಕ್ಷ್ಮಿ ಪ್ರಶಾಂತ್, ಆಡಳಿತಾಧಿಕಾರಿ ಪ್ರಶಾಂತ್ ಡಿ.ಆರ್. ಅಭಿನಂದಿಸಿದ್ದಾರೆ.