ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದಿಂದ ಪ್ರತಿಭಾ ಪುರಸ್ಕಾರ

ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದಿಂದ ಪ್ರತಿಭಾ ಪುರಸ್ಕಾರ

ದಾವಣಗೆರೆ, ಜ. 22- ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘ ಹಾಗೂ ಆರ್.ಎಲ್. ಹನುಮಂತಪ್ಪ ಚಾರಿಟೇಬಲ್ ಟ್ರಸ್ಟ್ ದಾವಣಗೆರೆ ಇವರ ಸಹಯೋಗದಲ್ಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಿತು.

ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ದಾವಣಗೆರೆ ಜಿಲ್ಲೆಯ ಕುರುಹಿನಶೆಟ್ಟಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆರ್.ಎಲ್. ಹನುಮಂತಪ್ಪ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರು ದಾವಣಗೆರೆ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ನಾಗಭೂಷಣ್‌, ಕಾರ್ಯದರ್ಶಿ  ವಕೀಲ ಕೆ.ಎನ್. ಹನುಮಂತಪ್ಪ, ಕುರುಹಿನಶೆಟ್ಟಿ ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ವಿಠಲ್ ಅಮಾಸಿ ಸೇರಿದಂತೆ ಸಮಾಜ ಬಾಂಧವರು, ಪೋಷಕರು, ವಿದ್ಯಾರ್ಥಿಗಳಿಗಳು ಉಪಸ್ಥಿತರಿದ್ದರು.

error: Content is protected !!