ಜಿಗಳಿ ಪಿಎಸಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಉಮೇಶ್, ಉಪಾಧ್ಯಕ್ಷರಾಗಿ ಜಿಗಳಿ ಕುಸುಮ

ಜಿಗಳಿ ಪಿಎಸಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಉಮೇಶ್, ಉಪಾಧ್ಯಕ್ಷರಾಗಿ ಜಿಗಳಿ ಕುಸುಮ

ಮಲೇಬೆನ್ನೂರು, ಜ. 20- ಜಿಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳ್ಳಿಹಾಳ್ ಊರಮುಂದ್ಲರ ಉಮೇಶ್ (ಹೆಚ್‌.ಟಿ. ಶಾಂತನಗೌಡರ ಮಗ) ಮತ್ತು ಉಪಾಧ್ಯಕ್ಷರಾಗಿ ಜಿಗಳಿಯ ಶ್ರೀಮತಿ ಕುಸುಮ ಜಿ.ಎಂ. ಜಯದೇವ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಇಲಾಖೆಯ ಶ್ರೀಮತಿ ನಿವೇದಿತಾ ಅವರು ಚನಾವಣಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.

ಸಂಘದ ನೂತನ ನಿರ್ದೇಶಕರಾದ ಜಿಗಳಿಯ ಡಿ.ಹೆಚ್. ಮಂಜುನಾಥ್, ಎಕ್ಕೆಗೊಂದಿ ರುದ್ರಗೌಡ, ಪುಟ್ಟಣ್ಣರ ಬಸವರಾಜ್, ಶ್ರೀಮತಿ ರತ್ನಮ್ಮ ಕೋಂ ಜಿ. ಆನಂದಪ್ಪ, ಜಿ.ಪಿ. ಹುನುಮಗೌಡ, ಜಿ. ಬೇವಿನಹಳ್ಳಿಯ ಜಿ.ಎಸ್. ಶಿವರಾಜ್, ಹಳ್ಳಿಹಾಳ್‌ನ ಕೆ.ಎಸ್. ವೀರನಗೌಡ, ತಿಮ್ಮನಗೌಡ, ಎ.ಕೆ. ಬಸವರಾಜ್, ಎಸ್.ವಿ ಕುಸುಮ ಸೇರಿದಂತೆ ಜಿಗಳಿ, ಹಳ್ಳಿಹಾಳ್, ಜಿ. ಬೇವಿನಹಳ್ಳಿ ಮತ್ತು ವಡೆಯರ ಬಸಾಪುರ ಗ್ರಾಮಗಳ ಮುಖಂಡರು ಹಾಜರಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಸಂಘದ ಸಿಇಓ ಎನ್.ಎನ್. ತಳವಾರ್ ಸ್ವಾಗತಿಸಿ, ವಂದಿಸಿದರು.

error: Content is protected !!