ದಾವಣಗೆರೆ, ಜ. 20- ನಗರದ ಪಿ.ಜೆ. ಬಡಾವ ಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಗುರು ಸಾರ್ವಭೌಮರಿಗೆ ಗೌಡ್ರ ಜಯದೇವಪ್ಪ ನವರ ಪುತ್ರ ಮಲ್ಲಿಕಾರ್ಜುನ್ (ಮುತ್ತಣ್ಣ), ಐಗೂರು ವಿಜಯಕುಮಾರ್, ಶ್ರೀ ಸಾಯಿ ಗಾರ್ಮೆಂಟ್ ಶಿವಕುಮಾರ್, ಪೇಂಟರ್ ವೀರೇಶ್ ಅವರುಗಳು ನೀಡಿರುವ ಕವಚವನ್ನು ಶ್ರೀ 1008 ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಶ್ರೀ ಗುರು ಸಾರ್ವಭೌಮರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ರಾಜಗೋಪಾಲ ಕಟ್ಟಿ ಮತ್ತು ಮಠದ ಪ್ರಧಾನ ಅರ್ಚಕ ಕೃಷ್ಣ ಆಚಾರ್ಯರು ಮತ್ತಿತರರು ಉಪಸ್ಥಿತರಿದ್ದರು.