ಜಗಳೂರು : ಲಾರಿಗೆ ಆಕಸ್ಮಿಕ ಬೆಂಕಿ

ಜಗಳೂರು : ಲಾರಿಗೆ ಆಕಸ್ಮಿಕ ಬೆಂಕಿ

ದಾವಣಗೆರೆ, ಜ.20- ಒಕ್ಕಣೆಗೆ ರೈತರು ಹರಡಿದ್ದ ಹುರುಳಿ ಸೊಪ್ಪಿನ ಮೇಲೆ ಸಂಚರಿಸಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ನಡೆದಿದೆ.

ಸೋಮವಾರ ಸಿಮೆಂಟ್ ತುಂಬಿದ ಲಾರಿ ಆಂಧ್ರಪ್ರದೇಶದಿಂದ ದಾವಣ ಗೆರೆ ಕಡೆಗೆ ಬರುವಾಗ ಜಗಳೂರು ತಾಲ್ಲೂಕಿನ ದೋಣೆಹಳ್ಳಿ-ಮುಷ್ಟೂರು ನಡುವೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಸಂಪೂರ್ಣ ಭಸ್ಮವಾಗಿದೆ.

ರೈತರು ಹುರುಳಿ ಸೊಪ್ಪನ್ನು ಒಕ್ಕಣೆಗೆ ರಸ್ತೆಯ ಮೇಲೆ ಹರಡಿದ್ದರು. ಹುರುಳಿ ಮೇಲೆ ಹರಿದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿ ನಿಲುಗಡೆ ಮಾಡಿ ಕೆಳಗೆ ಇಳಿದಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಲಾರಿಗೆ ವ್ಯಾಪಿಸಿದೆ. ಅಗ್ನಿಶಾಮಕ ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು.

error: Content is protected !!