ಹರಪನಹಳ್ಳಿ, ಜ.20- ಪಟ್ಟಣದ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ.
ಬ್ಯಾಂಕಿನ ಒಟ್ಟು 14 ಕ್ಷೇತ್ರಗಳ ಪೈಕಿ ಈಗಾಗಲೇ 8 ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ ದ್ದು, ಉಳಿದ 6 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಸದಸ್ಯರು ಬೆಳಿಗ್ಗೆಯಿಂದಲೇ ಮತಗಟ್ಟಿಗೆ ತೆರಳಿ ಉತ್ಸಾಹದಿಂದ ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿ ನಡೆಯುವಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ಪಟ್ಟಣದ ಅಪ್ಪರ್ ಮೇಗಳಪೇಟೆ ಶಾಲೆಯಲ್ಲಿ ಚುನಾ ವಣೆ ನಡೆಯಿತು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮತಗಟ್ಟಿಗೆ ತೆರಳಿ ತಮ್ಮ ಮತ ಚಲಾಯಿಸಿದರು.
ಹರಪನಹಳ್ಳಿ ಪಟ್ಟಣ `ಬ’ ವರ್ಗದ ಕ್ಷೇತ್ರದಿಂದ ನಾಗರಾಜ ಗೊಂಗಡಿ, ಹರಪನಹಳ್ಳಿ ಪಟ್ಟಣ ಸಾಮಾನ್ಯ ಕ್ಷೇತ್ರದಿಂದ ಪಿ.ಬಿ.ಗೌಡ, ಬಾಗಳಿ ಸಾಮಾನ್ಯ ಕ್ಷೇತ್ರದಿಂದ ಭರಮನಗೌಡ ಕೂಲಹಳ್ಳಿ, ಚಿಗಟೇರಿ ಹಿಂದುಳಿದ ಅ ವರ್ಗದ ಕ್ಷೇತ್ರದಿಂದ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಮತ್ತಿಹಳ್ಳಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಕನಕನ ಬಸಾಪುರದ ಮಂಜುನಾಥ ಕಮ್ಮಾರ, ತೊಗರಿಕಟ್ಟಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶಕುಂತಲಾ ತೊಗರಿಕಟ್ಟಿ, ಹಲವಾಗಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕಾಶಿನಾಥ. ಡಿ, ತೆಲಿಗಿ ಸಾಮಾನ್ಯ ಕ್ಷೇತ್ರದಿಂದ ಚಿದಾನಂದ ಸ್ವಾಮಿ ಎಸ್.ಎಂ, ನೀಲಗುಂದ ಸಾಮಾನ್ಯ ಕ್ಷೇತ್ರದಿಂದ ಬೇಲೂರು ಸಿದ್ದೇಶ, ಕಂಚಿಕೇರಿ ಸಾಮಾನ್ಯ ಕ್ಷೇತ್ರದಿಂದ ಶಾಂತಕುಮಾರ ರೆಡ್ಡಿ, ಅರಸಿಕೇರಿ ಸಾಮಾನ್ಯ ಕ್ಷೇತ್ರದಿಂದ ಸೌಭಾಗ್ಯಮ್ಮ.ಕೆ, ಉಚ್ಚಂಗಿದುರ್ಗ ಸಾಮಾನ್ಯ ಕ್ಷೇತ್ರದಿಂದ ರಾಜಕುಮಾರ ಭರ್ಮಪ್ಳ, ಲಕ್ಷ್ಮೀಪುರ ಸಾಮಾನ್ಯ ಕ್ಷೇತ್ರದಿಂದ ಪಿ.ಎಲ್.ಪೋಮ್ಯನಾಯ್ಕ, ಸಾಲ ಪಡೆಯದೇ ಇರುವ ಸದಸ್ಯರ ಸಾಮಾನ್ಯ ಕ್ಷೇತ್ರದಿಂದ ಲಾಟಿ ದಾದಾಪೀರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಧಿಕಾರಿ ಗಿರೀಶ್ ಬಾಬು ತಿಳಿಸಿದ್ದಾರೆ.
ಇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಪ್ಪ, ಅರಸಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಭತ್ತಹಳ್ಳಿ ಎಸ್ ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್, ಪುರಸಭೆ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಹೇಬ್, ಮುಖಂಡ ರಾದ ಬಿ.ಕೆ.ಪ್ರಕಾಶ, ನಿಟ್ಟೂರು ಸಣ್ಣ ಹಾಲಪ್ಪ, ಕುಲುಮಿ ಅಬ್ದುಲ್, ಎನ್.ಮಜೀದ್, ರಹಮತ್, ಆಲಮರಸಿಕೇರಿ ಜಗದೀಶ, ಪುಣಬಗಟ್ಟಿ ಹನುಮಂತಪ್ಪ, ವೃಷಬೇಂದ್ರ, ಶಂಕರ್, ಮತ್ತಿಹಳ್ಳಿ ಬೆಟ್ಟನಗೌಡ, ಹೆಚ್.ಶಂಕರಗೌಡ, ಎನ್. ಚೀರನಹಳ್ಳಿ ಓಬಣ್ಣ, ಹೆಚ್. ಸುಭಾಷ್ ಚಂದ್ರಬೋಷ್, ಮತ್ತಿಹಳ್ಳಿ ಕೆಂಚನಗೌಡ್ರು, ಕೆ.ಹನುಮಂತಪ್ಪ, ಕೆ.ಬಸವರಾಜ, ಪಿ.ಮಂಜುನಾಥ, ಕೆ.ವಾಮ ದೇವ್,ಅಜ್ಜನಗೌಡ್ರು, ಕೊಟ್ರಗೌಡ್ರು, ರಹಮತ್ ಕೂಲ್ ಸೇರಿದಂತೆ ಇತರರು ಇದ್ದರು.