ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷರಾಗಿ ಎಸ್ಕೆ ಪ್ರಭುಪ್ರಸಾದ್

ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್‌  ಉಪಾಧ್ಯಕ್ಷರಾಗಿ ಎಸ್ಕೆ ಪ್ರಭುಪ್ರಸಾದ್

ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷರಾಗಿ ಎಸ್ಕೆ ಪ್ರಭುಪ್ರಸಾದ್ - Janathavaniದಾವಣಗೆರೆ, ಜ. 20 – ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎಸ್.ಕೆ. ಪ್ರಭುಪ್ರಸಾದ್  ಅವರು ಉಳಿದ ಅವಧಿಗೆ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. 

ಬ್ಯಾಂಕಿನ ಅಧ್ಯಕ್ಷರಾದ ಎನ್.ಎ. ಮುರುಗೇಶ್‌ ಮತ್ತು ಎಲ್ಲಾ ನಿರ್ದೇಶಕ ಮಂಡಲಿಯವರು ಹಾಗೂ ವೃತ್ತಿಪರ ನಿರ್ದೇಶಕರುಗಳು, ವ್ಯವಸ್ಥಾಪನಾ ಮಂಡಲಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದು, ಪ್ರಭುಪ್ರಸಾದ್‌ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎಲ್. ಸತೀಶ್‌ನಾಯ್ಕ್‌ ಕಾರ್ಯ ನಿರ್ವಹಿಸಿದರು.

error: Content is protected !!