ರಾಣೇಬೆನ್ನೂರು, ಜ.17- ನಾಡಿದ್ದು ದಿನಾಂಕ 19ರ ಭಾನುವಾರ ನಗರದ ವೇಮನ ವಿದ್ಯಾವರ್ಧಕ ಸಂಘದ ಕಾರ್ಯಾಲ ಯದಲ್ಲಿ 613ನೇ ವೇಮನ ಜಯಂತಿ ಹಾಗೂ ವೇಮನ ಇತಿಹಾಸ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅಧ್ಯಕ್ಷತೆ ವಹಿಸುವರು ಎಂದು ವೈದ್ಯ ಮನೋಜ ಸಾವುಕಾರ ತಿಳಿಸಿದ್ದಾರೆ.
ಜಿಲ್ಲಾ ರಡ್ಡಿ ಸಂಘದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ, ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀ ನಿವಾಸ ಮಾನೆ, ಯು. ಬಿ. ಬಣಕಾರ, ಯಾಸೀರ್ ಆಹ್ಮದ್ ಖಾನ್ ಪಠಾಣ, ಜಿ.ಎಸ್. ಪಾಟೀಲ, ಎನ್.ಎಚ್.ಕೋನರಡ್ಡಿ ಮತ್ತು ಜಿ.ಟಿ ಪಾಟೀಲ ಮತ್ತಿತರರು ಭಾಗವಹಿಸುವರು.