ಅಂತರ ರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪಕ ರಾದ ಪ್ರಜಾಪಿತ ಬ್ರಹ್ಮಾ ಅವರ ಸ್ಮೃತಿ ದಿನಾಚರಣೆ ಇಂದು ನಡೆಯಲಿದೆ.
ಪ್ರಜಾಪಿತ ಬ್ರಹ್ಮಾ ಅವರ ಪೂರ್ವಾಶ್ರಮದ ಹೆಸರು ದಾದಾ ಲೇಖರಾಜ ಎಂದಾಗಿದ್ದು, ಬ್ರಹ್ಮಾಕುಮಾರೀಸ್ ಸಂಸ್ಥೆ ಸ್ಥಾಪನೆ ಮೂಲಕ ಪ್ರಜಾಪಿತ ಬ್ರಹ್ಮಾ ಎಂದಾಗಿದೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಿರಾಕಾರ ಪರಮ ಪಿತ ಪರಮಾತ್ಮನಿಂದ ಪ್ರಜಾಪಿತ ಬ್ರಹ್ಮಾರವರ ಸಾಕಾರ ಮಾಧ್ಯಮದ ಮೂಲಕ 1937ರಲ್ಲಿ ಸ್ಥಾಪಿಸಲ್ಪಟ್ಟಿತು.
ಇದೀಗ ಈ ಸಂಸ್ಥೆಯು ತನ್ನ 8500 ಶೈಕ್ಷಣಿಕ ಸೇವಾ ಕೇಂದ್ರಗಳ ಮೂಲಕ 132 ದೇಶಗಳಲ್ಲಿ ಈಶ್ವ ರೀಯ ಜ್ಞಾನ ಮತ್ತು ಸಹಜ ರಾಜಯೋಗ ಶಿಕ್ಷಣವನ್ನು ಕಲಿಸುವುದರ ಮೂಲಕ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡಲು ಸೇವಾ ನಿರತವಾಗಿದೆ. ಪ್ರಜಾ ಪಿತ ಬ್ರಹ್ಮಾ ಬಾಬಾರವರ ಮೂಲಕ ಸ್ವಯಂ ಪರಮಾತ್ಮನೇ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನೀಡುತ್ತಿರುವ ಅಧ್ಯಾ ತ್ಮಿಕ ಶಿಕ್ಷಣ ಲಕ್ಷಾಂತರ ಜನರಿಗೆ ನವ ಜೀವನ ನೀಡಿದೆ. ಇದು ಕೇವಲ ಒಬ್ಬರ ಅನುಭವವಲ್ಲದೇ, ಸುಮಾರು 11 ಲಕ್ಷ ನಿತ್ಯ ವಿದ್ಯಾರ್ಥಿಗಳ ಅನುಭವವಾಗಿದೆ.
ಪ್ರಜಾಪಿತ ಬ್ರಹ್ಮಾರವರು 1969, ಜನವರಿ
18 ರಂದು ಸ್ಥೂಲ ಶರೀರವನ್ನು ತ್ಯಜಿಸಿ ಸೂಕ್ಷ್ಮ ಶರೀರ ಧಾರಿಯಾಗಿ ಇಂದಿಗೂ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ದಿನವನ್ನು ಬ್ರಹ್ಮಾಕುಮಾರೀಸ್ ಸಂಸ್ಥೆಯು ವಿಶ್ವಶಾಂತಿ ದಿನವನ್ನಾಗಿ ವಿಶ್ವಾದ್ಯಂತ ಎಲ್ಲಾ ಈಶ್ವರೀಯ ವಿಶ್ವ ವಿದ್ಯಾಲಯಗಳಲ್ಲಿ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ದಾವಣಗೆರೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ವಿವರಿಸಿದ್ದಾರೆ.