ಚಂದ್ರಗುಪ್ತ ಮೌರ್ಯ ವಿದ್ಯಾಸಂಸ್ಥೆಯಲ್ಲಿ ನರ್ಸರಿ ತರಗತಿಗಳಿಗೆ ಚಾಲನೆ ನೀಡಿದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ
ಹರಿಹರ, ಜ. 17- ಮಕ್ಕಳ ಕಲಿಕೆಗೆ ಪೂರಕ ವಾತಾ ವರಣ ನಿರ್ಮಿಸುವ ಉದ್ದೇಶದಿಂದ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಲಭಿಸಿದರೆ ಮಕ್ಕಳ ಬದುಕು ಭವಿಷ್ಯ ಉತ್ತಮವಾಗಿ ರೂಪಗೊಳ್ಳುತ್ತದೆ ಎಂಬ ಉದ್ದೇಶದಿಂದ ಸಂಸ್ಥೆಯಲ್ಲಿ ನರ್ಸರಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ ಎಂದು ಕಾಗಿನೆಲೆ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.
ಅವರು ಬೆಳ್ಳೂಡಿ ಕಾಗಿನೆಲೆ ಮಹಾ ಸಂಸ್ಥಾನ, ಕನಕ ಗುರು ಪೀಠ ಶಾಖಾ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಚಂದ್ರಗುಪ್ತ ಮೌರ್ಯ ವಿದ್ಯಾ ಸಂಸ್ಥೆಯಲ್ಲಿ ನರ್ಸರಿ ತರಗತಿಗಳಿಗೆ ಚಾಲನೆ ಮಾಡಿ ಮಾತನಾಡುತ್ತಿದ್ದರು.
ಮಕ್ಕಳು ತಳಮಟ್ಟದಲ್ಲಿ ಉತ್ತಮವಾಗಿ ಕಲಿತಾಗ ಮಾತ್ರ ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಕಲಿಕೆಗೆ ಅನುಕೂಲಕರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಮಾಗೋಡಿ, ನಿಂಗಪ್ಪ ಉಪ್ಪಾರ್, ಬಸವರಾಜ್ ತುಂಬಿಗಿ, ರವಿ ಆರ್., ಎಸ್. ನಿಂಗಪ್ಪ, ಶ್ರೀಮತಿ ಡಾ. ಶೃತಿ ಇನಾಮ್ದಾರ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.