ಕನ್ನಿಕಾಪರಮೇಶ್ವರಿ ಕೋ-ಆಪ್. ಬ್ಯಾಂಕ್ ಅಧ್ಯಕ್ಷರಾಗಿ ಆರ್.ಜಿ.ಎಸ್‌. ಪುನರಾಯ್ಕೆ

ಕನ್ನಿಕಾಪರಮೇಶ್ವರಿ ಕೋ-ಆಪ್. ಬ್ಯಾಂಕ್  ಅಧ್ಯಕ್ಷರಾಗಿ ಆರ್.ಜಿ.ಎಸ್‌. ಪುನರಾಯ್ಕೆ

ಉಪಾಧ್ಯಕ್ಷರಾಗಿ ಎ.ಎಸ್. ಸತ್ಯನಾರಾಯಣ ಸ್ವಾಮಿ

ದಾವಣಗೆರೆ, ಜ. 16 – ನಗರದ ಪ್ರತಿಷ್ಠಿತ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕಿನ  ಹಾಲಿ ಅಧ್ಯಕ್ಷರಾದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಜಿ. ಶ್ರೀನಿವಾಸಮೂರ್ತಿ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಸಹ ಕಾರ್ಯದರ್ಶಿಯೂ ಆಗಿರುವ ವಾಣಿಜ್ಯೋದ್ಯಮಿ ಎ.ಎಸ್. ಸತ್ಯನಾರಾಯಣ ಸ್ವಾಮಿ ಅವರೂ ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ನೂತನ ನಿರ್ದೇಶಕರ ಪ್ರಥಮ ಸಭೆಯಲ್ಲಿ ಈ ಆಯ್ಕೆ ನಡೆಯಿತು ಎಂದು  ಚುನಾವಣಾಧಿಕಾರಿ ಸತೀಶ್ ನಾಯ್ಕ್ ಘೋಷಿಸಿದ್ದಾರೆ.

ಚುನಾವಣೆ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ  ಶ್ರೀನಿವಾಸ ಮೂರ್ತಿ, ಮುಂದಿನ ದಿನಗಳಲ್ಲಿ ಶೀಘ್ರದಲ್ಲಿಯೇ ಬ್ಯಾಂಕು ಯರಗುಂಟೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಹೊಂದಿರುವ 8000 ಚ.ಅಡಿ ನಿವೇಶನದಲ್ಲಿ ಸ್ವಂತ ಕಟ್ಟಡ ಹಾಗೂ 5ನೇ ಶಾಖೆ ಯನ್ನು ಸುಂದರ ಒಳಾಂಗಣದೊಂದಿಗೆ, ಡಿಜಿ ಟಲ್ ಬ್ಯಾಂಕಿಂಗ್ ಸೇವೆಗಳಾದ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯು.ಪಿ.ಐ. ಮತ್ತು ಮುಂತಾದ ಸೇವೆಗಳನ್ನು ಸದಸ್ಯ ಬಾಂಧವರಿಗೆ ಮತ್ತು ಜನತೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

2024-25ನೇ ಸಾಲಿನ ವಾರ್ಷಿಕ ಅಂತ್ಯಕ್ಕೆ ರೂ.5 ಕೋಟಿ 10 ಲಕ್ಷಗಳ ನಿವ್ವಳ ಲಾಭವನ್ನು 2025-26ನೇ ಸಾಲಿಗೆ ಸುಮಾರು ರೂ. 6 ಕೋಟಿಗಳ ನಿವ್ವಳ ಲಾಭವನ್ನು ಗಳಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು. 

ಬ್ಯಾಂಕಿನ ನಿರ್ದೇಶಕರುಗಳಾದ ಆರ್.ಎಲ್. ಪ್ರಭಾಕರ್, ಕಾಸಲ್ ಎಸ್. ಸತೀಶ್, ಕೆ.ಎನ್. ಅನಂತರಾಮ ಶೆಟ್ಟಿ, ಬಿ.ಪಿ. ನಾಗಭೂಷಣ್, ಕೆ.ವಿ. ಮಂಜುನಾಥ್, ಎನ್. ಕಾಶೀನಾಥ್, ಜೆ. ರವೀಂದ್ರ ಗುಪ್ತ, ಬಿ.ಎಸ್. ಶಿವಾನಂದ, ವೈ.ಬಿ. ಸತೀಶ್, ಮಹಿಳಾ ನಿರ್ದೇಶಕರುಗಳಾದ ಶ್ರೀಮತಿ ಆರ್.ಬಿ. ಗೀತಾ, ಶ್ರೀಮತಿ ಸುಧಾ ನಾಗರಾಜ್, ಪ್ರಧಾನ ವ್ಯವಸ್ಥಾಪಕ ಪಡಗಲ್ ಪ್ರಶಾಂತ್, ಆಡಳಿತಾತ್ಮಕ ಸಲಹೆಗಾರ ಡಿ.ಹೆಚ್. ಅಂಬಿಕಾಪತಿ ಶೆಟ್ಟಿ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!