ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರಕಟ ನಗರದ ಮೂವರು ಪತ್ರಕರ್ತರಿಗೆ ಪ್ರಶಸ್ತಿ

ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರಕಟ ನಗರದ ಮೂವರು ಪತ್ರಕರ್ತರಿಗೆ ಪ್ರಶಸ್ತಿ

ದಾವಣಗೆರೆ, ಜ. 16- ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ತನ್ನ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಗೊಳಿ ಸಿದ್ದು, ದಾವಣಗೆರೆ ಜಿಲ್ಲೆಯ ಮೂವರು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಸೇವಾ ಚಟುವಟಿಕೆಗಳಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಗಳೂರು ತಾಲ್ಲೂಕು ಘಟಕಕ್ಕೆ ಅತ್ಯುತ್ತಮ ಪ್ರಶಸ್ತಿ ನೀಡಲಾಗಿದೆ.

ದಾವಣಗೆರೆ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್ ಅವರಿಗೆ ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ ನಾಡಿಗೇರ ಕೃಷ್ಣರಾಯರ ಪ್ರಶಸ್ತಿ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಅವರಿಗೆ ಅತ್ಯುತ್ತಮ ಮುಖಪುಟಕ್ಕೆ ಗರುಡನಗಿರಿ ಪ್ರಶಸ್ತಿ, ಪವಿತ್ರ ಪ್ರಜಾ – ಸಹಾಯವಾಣಿ  ಸಂಪಾದಕ ಎಸ್.ಕೆ. ಒಡೆಯರ್ ಅವರಿಗೆ ವಿಶೇಷ ಪ್ರಶಸ್ತಿ ದೊರೆತಿದೆ.

ತುಮಕೂರಿನಲ್ಲಿ ನಾಡಿದ್ದು ದಿನಾಂಕ 18 ಮತ್ತು 19ರಂದು ನಡೆಯುವ 39ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ   ಮಾಡಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ತಿಳಿಸಿದ್ದಾರೆ.

ಅಭಿನಂದನೆ : ಪ್ರಶಸ್ತಿ ಪುರಸ್ಕೃತರನ್ನು ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ. ಬದರಿನಾಥ್, ರಾಜ್ಯ ಸದಸ್ಯ ಕೆ. ಚಂದ್ರಣ್ಣ ಅಭಿನಂದಿಸಿದ್ದಾರೆ.

error: Content is protected !!