ಜಿಹ್ವೇಶ್ವರ ಮಂದಿರದಲ್ಲಿಂದು ರಾಮ ಪೂಜೆ

ಜಿಹ್ವೇಶ್ವರ ಮಂದಿರದಲ್ಲಿಂದು ರಾಮ ಪೂಜೆ

ಹೊಂಡದ ಸರ್ಕಲ್‌ನಲ್ಲಿನ ಸ್ವಕುಳಸಾಳಿ ಸಮಾಜದ ಜಿಹ್ವೇಶ್ವರ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು.ಈ ವರ್ಷ ಮಹಿಳಾ ಮಂಡಲದ ವತಿಯಿಂದ ಸಮಾಜದ ಮನೆಯಲ್ಲಿ  ಶ್ರೀ ರಾಮನ ಪೂಜೆ ನಡೆಯಲಿದೆ. ಶ್ರೀ ರಾಮನ ನಾಮಜಪ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು ಎಂದು ಸ್ವಕುಳ ಸಾಳಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತ ರೋಖಡೆ ತಿಳಿಸಿದ್ದಾರೆ.

error: Content is protected !!