ಕುಣೆಬೆಳಕೆರೆ ಪಿಎಸಿಎಸ್‌ಗೆ ಅವಿರೋಧ ಆಯ್ಕೆ

ಕುಣೆಬೆಳಕೆರೆ ಪಿಎಸಿಎಸ್‌ಗೆ ಅವಿರೋಧ ಆಯ್ಕೆ

ಮಲೇಬೆನ್ನೂರು, ಜ.15- ಕುಣೆಬೆಳಕೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.

ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗದ ಕುಣೆಬೆಳಕೆರೆಯ ದಿಳ್ಯೆಪ್ಪ, ಎ.ಸಿದ್ದಪ್ಪ, ಬಿ.ಎಸ್.ಮಧು, ಬಿ.ಚಿಕ್ಕಪ್ಪ, ಬೂದಿಹಾಳ್ ಗ್ರಾಮದ ಶಂಕರಮೂರ್ತಿ, ಮಹಿಳಾ ಮೀಸಲು ವರ್ಗದಿಂದ ಕುಣೆಬೆಳಕೆರೆಯ ಚೌಡಮ್ಮ ನಿಂಗಪ್ಪ, ಪುಷ್ಪ ಜಿ.ಸಿ.ರುದ್ರಪ್ಪ, ಬಿಸಿಎಂ `ಎ’ ವರ್ಗದಿಂದ ಎಂ.ಸಿ.ಶಿವಲಿಂಗಪ್ಪ, ಬಿಸಿಎಂ `ಬಿ’ ವರ್ಗದಿಂದ ಚನ್ನಪ್ಪಗೌಡ, ಎಸ್ಟಿಯಿಂದ ಹೆಚ್.ಅಂಜಿನಪ್ಪ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ಜಿ.ತಿಪ್ಪೇಶ್ ಅವರುಗಳು ಮುಂದಿನ 5 ವರ್ಷಗಳ ಅವಧಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

error: Content is protected !!