ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಅವಿರೋಧ ಆಯ್ಕೆ

ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಅವಿರೋಧ ಆಯ್ಕೆ

ಹರಿಹರ, ಜ.15- ನಗರದ ತುಂಗಭದ್ರಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಮೊನ್ನೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಂ. ಶಿವಾನಂದಪ್ಪ ಮತ್ತು ಹೇಮಂತರಾಜ್ `ಡಿ’ ಗುಂಪಿನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹೆಚ್. ಸುನಿತಾ ತಿಳಿಸಿದ್ದಾರೆ.

ಶಿವಾನಂದಪ್ಪ ಎಂ. ಬಿನ್ ಬಸಪ್ಪ ಹೆಚ್.ಎಂ., ಹೇಮಂತರಾಜ್.ಡಿ. ಬಿನ್ ಸಿದ್ದಪ್ಪ ಡಿ, ಮಂಜುನಾಥ್ ಆರ್.ಕೆ. ಬಿನ್ ರಾಮಚಂದ್ರಪ್ಪ ಪಿ.ಕೆ. ಚನ್ನಬಸಪ್ಪ ಜಿ.ಎಸ್. ಬಿನ್. ಪಾಟೀಲ್ ಸಂಗಪ್ಪ, ಮಂಜಪ್ಪ ಬಿ. ಬಿನ್ ರೇವಣ್ಣಪ್ಪ ಹೆಚ್.ಬಿ., ಹನುಮಂತಪ್ಪ ಎಂ. ಬಿನ್ ಹನುಮಂತಪ್ಪ, ಜಗನ್ನಾಥ ಜಿ.ಎನ್. ನಾಗಪ್ಪ ಗೌಡ್ರು, ಶಿವಣ್ಣ ಪಿ. ದೊಡ್ಡ ನಿಂಗಪ್ಪ ಹಲಸಬಾಳು ಹಿಂದುಳಿದ ಪ್ರ ವರ್ಗ `ಬಿ’ ಮಕ್ಬೂಲ್ ಮುಲ್ಲಾ ಬಿನ್ ಸೈಯದ್ ಮಹಮ್ಮದ್ ಸಾಬ್, ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಎ. ಜಯಮ್ಮ ಎನ್‌. ಕೋಂ ಮಂಜುನಾಥ್ ಎನ್.ಟಿ., ಪರಿಶಿಷ್ಟ ಜಾತಿ ಗಂಗಮ್ಮ ಎ.ಬಿ. ಕೋಂ ಬಸವರಾಜ್ ಬಿ., ಕುಸುಮ ಎಸ್. ಕೋಂ ರಂಗಪ್ಪ ಎಸ್ ರವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಶರತ್ ಜಿ.ಬಿ. ಹಾಗೂ ಇತರರು ಹಾಜರಿದ್ದರು.

error: Content is protected !!