ದಾವಣಗೆರೆ, ಜ. 14- ಹಳೇ ಕುಂದುವಾಡ ದಿಂದ ಬನ್ನಿಕೋಡು ಹಾಗೂ ಇನ್ನಿತರೆ ಗ್ರಾಮಗಳಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನೇರ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಹಾಗೂ ಪ್ರಸ್ತುತ ಇರುವ ಕೆಳ ಸೇತುವೆ ಅವೈಜ್ಞಾನಿಕವಾಗಿದ್ದು, ಸರಿಯಾಗಿ ನಿರ್ಮಿಸುವಂತೆ ಹಳೇ ಕುಂದುವಾಡ ಗ್ರಾಮಸ್ಥರು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೆಚ್.ಜಿ ಗಣೇಶಪ್ಪ, ಮಾಜಿ ನಿರ್ದೇಶಕ ಜೆ. ಮಾರುತಿ, ಮುಖಂಡರಾದ ಮುರುಗೆವ್ವರ್ ಅಣ್ಣಪ್ಪ, ಬಾರಿಕರ ಚಂದ್ರಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಜುಂಜಿ ಮಹಾಂತೇಶ್, ಹನುಮಂತಪ್ಪ, ರಾಜಪ್ಪ, ದಯಾನಂದ್, ಮಧುನಾಗರಾಜ್, ಜಿ.ಹೆಚ್. ಗಣೇಶ್, ರಮೇಶ್, ರಾಜು, ಹೊನ್ನಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.