ಹರಪನಹಳ್ಳಿ, ಜ.13- ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಭಾನುವಾರ ಇಲ್ಲಿನ ಉಪ ಕಾರಾಗೃಹದಲ್ಲಿ `ವಚನ ಗಾಯನ, ಜಾನಪದ ಸಂಗೀತ’ ಕಾರ್ಯಕ್ರಮ ನಡೆಯಿತು.
`ನಡೆಯುವವನು ಎಡವಲೇ ಬೇಕು, ನೀವು ಎಡವಿ ದ್ದೀರಿ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸನ್ನಡತೆ ಹೊಂದಿ’ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್ ಕಾರಾಗೃಹದಲ್ಲಿನ ಬಂಧಿಗಳಿಗೆ ಹೇಳಿದರು. ಸಾಸ್ವಿಹಳ್ಳಿ ಬಿ. ಶಂಕ್ರಪ್ಪ ಹಾಗೂ ತಂಡ ಮತ್ತು ಸಂಘದ ಸದಸ್ಯರಾದ ಎಂ. ಸಲಾಮ್ ಸಾಬ್, ಕೆ. ಈಶ್ವರಪ್ಪ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಈ ವೇಳೆ ಉಪ ಕಾರಾಗೃಹದ ಅಧೀಕ್ಷಕ ಕೆ.ಜಿ. ಭಂಡಾರಿ, ಹೆಡ್ ವಾರ್ಡರ್ ಎಸ್.ಜೆ.ಮುರುಗೇಶ, ನರಸಿಂಗ ಕಲಾಲ್, ಬಿ. ಶೇಖರಪ್ಪ, ಫಕ್ಕೀರಪ್ಪ, ಕೆ. ಕೊಟ್ರಪ್ಪ, ಗಾಯಿತ್ರಮ್ಮ, ಹುಣ್ಸಿಹಳ್ಳಿ ಹನುಮಂತಪ್ಪ, ಹಾಲಪ್ಪ, ಸಾಸ್ವಿಹಳ್ಳಿ ಗ್ರಾಮದ ಸಂಗೀತಗಾರರು, ಕಾರಾಗೃಹದ ಸಿಬ್ಬಂದಿ ಇದ್ದರು.