ದಾವಣಗೆರೆ, ಜ. 13- ಕೊಂಡಜ್ಜಿಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 15ರ ಬುಧವಾರ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಹೂವಿನ ಅಲಂಕಾರದೊಂದಿಗೆ ಪಡಿ ಪೂಜೆ ನಂತರ ಅನ್ನ ಸಂತರ್ಪಣೆ ಹಾಗೂ ಪೂಜೆಯ ನಂತರ ಗ್ರಾಮದ ಮರುಳಸಿದ್ದೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ದಿನಾಂಕ 16ರ ಗುರುವಾರ ಶಬರಿಮಲೈ ಯಾತ್ರೆ ಪ್ರಾರಂಭವಾಗಲಿದೆ.