`ಹೇ ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ’

`ಹೇ ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ’

ವಿಜಯನಗರ ಜಿಲ್ಲಾಧಿಕಾರಿ ದಿವಾಕರ್‌ಗೆ ಗದರಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ವಿಜಯನಗರ, ಜ.13- `ಹೇ.. ನೀನ್ಯಾರು.. ನೀನ್ಯಾಕೆ ಸ್ವಾಮೀಜಿ ಪಕ್ಕ ಕೂತಿದೀಯಾ.. ಈ ಕಡೆ ಬಾ’ ಎಂದು ವಿಜಯ ನಗರ ಜಿಲ್ಲೆಯ ಜಿಲ್ಲಾಧಿ ಕಾರಿ ದಿವಾಕರ್‌ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗದರಿದ ಘಟನೆ ಭಾನುವಾರ ನಡೆದಿದೆ. 

ವಿಜಯನಗರ ಜಿಲ್ಲೆಯ ಬಂಡಿಹಳ್ಳಿ ಗ್ರಾಮದಲ್ಲಿ ಸರ್ವಧರ್ಮ ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಭಾಷಣ ಮಾಡುವಾಗ ಜಿಲ್ಲಾಧಿಕಾರಿ ದಿವಾಕರ್ ಮೇಲೆ ಗರಂ ಆದ ಘಟನೆ ನಡೆಯಿತು. 

ದಿವಾಕರ್ ಅವರು ವೇದಿಕೆ ಮೇಲಿದ್ದ ಸ್ವಾಮೀಜಿ ಪಕ್ಕದಲ್ಲಿಯೇ ಕುಳಿತುಕೊಂಡಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ನೀನು ಯಾರು? ಎಂದು ಕೇಳಿದರು.. ಅದಕ್ಕೆ ಜಿಲ್ಲಾಧಿಕಾರಿ, ನಾನು ವಿಜಯನಗರ ಜಿಲ್ಲೆಯ ಡಿಸಿ ಸರ್ ಎಂದು ಉತ್ತರಿಸಿದರು. ಹೇ ನೀನು ಸ್ವಾಮೀಜಿ ಪಕ್ಕ ಯಾಕೆ ಕುಳಿತುಕೊಂಡಿದ್ದೀಯಾ? ಆ ಕಡೆ ಕುಳಿತುಕೊ ಹೋಗು ಅಂತಾ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಹೇಳಿದರು.

error: Content is protected !!