ಹರಿಹರ, ಜ.12- ಅಯ್ಯಪ್ಪ ಸ್ವಾಮಿ ದ್ವೀಪೋತ್ಸವದ ನಿಮಿತ್ತ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರಿಂದ ಭಾನುವಾರ ಇಲ್ಲಿನ `ನಮ್ಮ ಊರು, ನಮ್ಮ ಹೊಣೆ’ ತಂಡದವರು ತುಂಗಭದ್ರಾ ನದಿಯ ತಟವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ಈ ವೇಳೆ ತಂಡದ ಮುಖ್ಯಸ್ಥೆ ಅಂಜು ಸುರೇಶ್ ರಾಜೇನವರ್, ರವಿಕುಮಾರ್, ಸಾಕ್ಷಿ ಶಿಂಧೆ, ರಾಘವೇಂದ್ರ ತೆಲ್ಕರ್, ಸಾಕಮ್ಮ, ಪ್ರವೀಣ್ ಮಜ್ಜಿಗಿ, ಗಂಗಾಧರ್ ದುರಗೋಜಿ, ನಾಗರಾಜ್ ತೆಲ್ಕರ್, ಟಿ.ಪಿ. ನಿರಂಜನ, ನವನೀತ, ರೂಪ ಬಳ್ಳಾರಿ, ಅಜಯ್, ಎ. ಶ್ರೀನಿವಾಸ, ಅಂಬುಜಾ ಪಿ ರಾಜೋಳ್ಳಿ, ಲೋಕೇಶ್ ಮೂರ್ಕಲ್, ಅರುಣಾಸ್ವಾಮಿ, ಸಚಿನ್ ಇತರರು ಇದ್ದರು.