ಎಸ್ಸೆಸ್ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಇಎನ್‌ಟಿ ವಿಭಾಗದಿಂದ ಜನ ಜಾಗೃತಿ

ಎಸ್ಸೆಸ್ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಇಎನ್‌ಟಿ ವಿಭಾಗದಿಂದ ಜನ ಜಾಗೃತಿ

ದಾವಣಗೆರೆ, ಜ. 12- ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ  ಇ.ಎನ್.ಟಿ ವಿಭಾಗದಲ್ಲಿ ನವಜಾತ ಶಿಶುಗಳಲ್ಲಿ ಶ್ರವಣ ಪರೀಕ್ಷೆ ಮಾಡುವ ಹಾಗೂ ಶ್ರವಣದೋಷಕ್ಕೆ ಪರಿಹಾರಗಳ ಬಗ್ಗೆ ಉಪನ್ಯಾಸ ನೀಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಇ.ಎನ್.ಟಿ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್‌ ಬಿ.ಎಸ್, ಡಾ.ಮುನೀಶ್, ಡಾ.ಅಜಿತ್ , ಡಾ ನಾಗರಾಜ್ , ಡಾ.ಕೀರ್ತಿ, ಡಾ.ಲತಾಬಾಯಿ ಹಾಗೂ  ಎಸ್ ಎಸ್ ಕೇರ್ ಟ್ರಸ್ಟ್  ಕೋರ್ ಕಮಿಟಿ ಮೇಂಬರ್ ಆದ ಮಕ್ಕಳ ವಿಭಾಗದ ಡಾ.ಲತಾ ಜಿ.ಎಸ್ ಅವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳು, ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಈ ಕಾರ್ಯಕ್ರಮದಲ್ಲಿ ನವಜಾತ ಶಿಶುವಿನಲ್ಲಿ NJF(OAE) ಹಾಗೂ ಬೆರಾ ಎಂಬ ಶ್ರವಣ ಪರೀಕ್ಷೆಯ ಮಹತ್ವ, ನಿರ್ಲಕ್ಷಿಸಿದರೆ ಆಗುವ ತೊಂದರೆಗಳು ಹಾಗೂ ಶ್ರವಣೋಪಕರಣಗಳ ಬಗ್ಗೆ ಡಾ.ಕೀರ್ತಿಯವರು ನೆರೆದಿದ್ದ ಜನರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ವೈದ್ಯಕೀಯ ನಿರ್ದೇಶಕರಾದ ಡಾ.ಅರುಣ್ ಕುಮಾರ್ ಅಜ್ಜಪ್ಪನವರು  ಮತ್ತು ಪ್ರಾಂಶುಪಾಲರಾದ ಡಾ.ಪ್ರಸಾದ್ ಬಿ.ಎಸ್. ಉಪಸ್ಥಿತರಿದ್ದರು.

error: Content is protected !!