ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹ ಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್ ಸ್ವಾಮೀಜಿ ಪುಣ್ಯರಾಧನೆ ಹಾಗೂ ತಿರಕನೂರಿನಲ್ಲಿ ರಂಗದಾಸೋಹವು ಮಲ್ಲಾಡಿಹಳ್ಳಿ ಶ್ರೀ ಸೂರುದಾಸ್‌ಜಿ ರಂಗಮಂಟಪ ಆಶ್ರಮ ಆವರಣದಲ್ಲಿ ಇಂದು ನಡೆಯಲಿದೆ.
ಇಂದು ಸಂಜೆ 5.30ಕ್ಕೆ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಸಮಾರೋಪ ಭಾಷಣ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇನ್‌ಸೈಟ್ ಸಂಸ್ಥೆ ಸಂಸ್ಥಾ ಪಕ ಬಿ.ಜಿ. ವಿನಯ್ ಕುಮಾರ್, ಬೆಂಗಳೂರು ಎಸ್ಪಿ ವೆಂಕಟೇಶ್ ಪ್ರಸನ್ನ, ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ಸಹನಿರ್ದೇಶಕ ಎಸ್.ಕೆ. ಪ್ರಸಾದ್, ಜಿ.ದೇವರಾಜು ಕರ್ನಾಟಕ ಶಾಲಾ ಶಿಕ್ಷಕರ ಮತ್ತು ಮೌಲ್ಯ ನಿರ್ಣಯ ಮಂಡಳಿ ಉಪನಿರ್ದೇಶಕ ಜಿ.ದೇವರಾಜು, ಸೇಲ್ಕೋ ಸೋಲಾರ್ ಮುಖ್ಯ ವ್ಯವಸ್ಥಾಪಕ ಮೋಹನ್ ಹೆಗಡೆ, ಎಂ. ನಾಸಿರುದ್ದಿನ್, ಅರಬಗಟ್ಟೆ ಅಣ್ಣಪ್ಪ, ಸುರೇಶ ಕಲಾಪ್ರಿಯ, ಮನೋ ಹರ ಕೆ.ಎಂ. ಹಾಗೂ ವಿಶ್ವಸ್ತರು ಉಪಸ್ಥಿತರಿರುವರು.