ನಗರದಲ್ಲಿ ಇಂದು ಲಯನ್ಸ್ ಪ್ರಾಂತೀಯ ಸಮ್ಮೇಳನ

ನಗರದಲ್ಲಿ ಇಂದು ಲಯನ್ಸ್ ಪ್ರಾಂತೀಯ ಸಮ್ಮೇಳನ

ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317 – ಸಿ ಪ್ರಾಂತ 9ರ ಪ್ರಾಂತೀಯ ಸಮ್ಮೇಳನವು ರಾಷ್ಟ್ರೀಯ ಹೆದ್ದಾರಿ ಕುಂದುವಾಡ ಕೆರೆ ಹತ್ತಿರದ ಸುಶಿ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ನಡೆಯಲಿದೆ.

ಸಾಮಾಜಿಕ ಕಳಕಳಿಯ ಉದ್ಯಮಿ ವೈ.ಬಿ. ಸತೀಶ್ ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿರುವ ಈ ಸಮ್ಮೇಳನವನ್ನು ಶ್ರೀಮತಿ ಲಕ್ಷ್ಮಿ ವೈ.ಬಿ. ಸತೀಶ್ ಉದ್ಘಾಟಿಸಲಿದ್ದಾರೆ.

ಲಯನ್ಸ್ ಜಿಲ್ಲೆ 324 ಡಿ1 ಮಾಜಿ ರಾಜ್ಯಪಾಲ ಜಿ. ಶ್ರೀನಿವಾಸ್ ಮತ್ತು ಹೊಸನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಹೆಚ್ಚುವರಿ ಮುಖ್ಯಸ್ಥರಾದ ಡಾ. ಕೆ. ಶ್ರೀಪತಿ ಹಳಗುಂದ ಅವರುಗಳು ಮುಖ್ಯ ಅತಿಥಿಗಳಾಗಿದ್ದಾರೆ. ಲಯನ್ಸ್ ಜಿಲ್ಲೆ 317 ಸಿ ಉಪ ರಾಜ್ಯಪಾಲರುಗಳಾದ ಶ್ರೀಮತಿ ಸಪ್ನ ಸುರೇಶ್ ಮತ್ತು ರಾಜು ಕೋಟ್ಯಾನ್, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಮಾರ್ಗದರ್ಶಕರಾದ ಆರ್.ಜಿ. ಶ್ರೀನಿವಾಸ್ ಸಮಾರಂಭದ ವೇದಿಕೆಯಲ್ಲಿ  ಉಪಸ್ಥಿತರಿರುವರು.

ದಾವಣಗೆರೆ ಲಯನ್ಸ್ ಕ್ಲಬ್  ಅಧ್ಯಕ್ಷ ಎಸ್.ಜಿ. ಉಳವಯ್ಯ, ಕಾರ್ಯದರ್ಶಿ ಸಿ. ಅಜಯ್‌ನಾರಾಯಣ, ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್ ಅವರುಗಳ ನೇತೃತ್ವದ ದಾವಣಗೆರೆ ಲಯನ್ಸ್ ಕ್ಲಬ್ ಈ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿದೆ.

 ಸಮ್ಮೇಳನದ ಸ್ವಾಗತ ಸಮಿತಿ ಛೇರ್ಮನ್ ಎನ್.ವಿ. ಬಂಡಿವಾಡ, ಕಾರ್ಯದರ್ಶಿ ಬೆಳ್ಳೂಡಿ ಶಿವಕುಮಾರ್, ಖಜಾಂಚಿ ಎನ್.ಸಿ. ಬಸವರಾಜ್, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಅವರುಗಳು ಸಮಾರಂಭದ ನೇತೃತ್ವ ವಹಿಸಿಕೊಂಡಿದ್ದಾರೆ.

error: Content is protected !!