ಯುವ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ತಿಳಿಸಬೇಕು : ಶಂಕರ್ ಖಟಾವ್ಕರ್
ಹರಿಹರ, ಜ.10- ಹಿರಿಯರು, ಧಾರ್ಮಿಕ ಗುರುಗಳು, ಶರಣರು ಮತ್ತು ಸಂತರು ಹೇಳಿ ಕೊಟ್ಟ ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋದಾಗ ಮಾತ್ರ ಮುಂದಿನ ಯುವ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ- ವಿಚಾರಗಳನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದು ವಿಠ್ಠಲ ರುಕ್ಮಿಣಿ ದೇವಸ್ಥಾನ ಸಮಿತಿಯ ಅಧ್ಯಕ್ಷರೂ ಆದ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಹೇಳಿದರು.
ನಗರದ ನಾಮದೇವ ಶಿಂಪಿ ಕಲ್ಯಾಣ ಮಂಟಪದ ಆವರಣದಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರುದ್ರಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ತುಳಸಿ ಅರ್ಚನೆ ಸೇರಿದಂತೆ, ವಿವಿಧ ಪೂಜಾ ಕಾರ್ಯಕ್ರಮಗಳ ನಂತರ ಅವರು ಮಾತನಾಡಿದರು.
ನಾಡಿನ ಜನರು ಸಮೃದ್ಧ ಜೀವನ ನಡೆಸುವುದಕ್ಕೆ ನಮ್ಮ ದಾರ್ಶನಿಕರು, ಸಂತರು ತಿಳಿಸಿರುವ ಧರ್ಮದ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕಾಗಿದೆ.
ಅಲ್ಲದೇ ಮುಂದಿನ ಪೀಳಿಗೆಯ ಅನುಕೂಲದ ದೃಷ್ಟಿಯಿಂದ ಆಚರಣೆ ಮಾಡುವುದು ಮತ್ತು ಅದನ್ನು ಉಳಿಸಿಕೊಂಡು ಹೋಗುವಂತದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಜಿತ್ ಸಾವಂತ್, ನಾಗಮಣಿ ಶಾಸ್ತ್ರೀ, ಶಿವಪ್ರಕಾಶ್ ಶಾಸ್ತ್ರೀ, ಬಸವರಾಜ್ ಪಾಟೇಲ್, ಸುಭಾಷ್ ಬೊಂಗಾಳೆ, ಅಂಬಾಸಾ ಹಂಸಾಗರ್, ಶ್ರೀನಿವಾಸ ಮೆಹರ್ವಾಡೆ, ಶಿವಪ್ರಕಾಶ್ ಶ್ರೇಷ್ಠಿ, ರಾಜು ಕಿರೋಜಿ, ನಗರಸಭೆ ಸದಸ್ಯೆ ನಾಗರತ್ನ, ಅಂಜನಾ ಖಟಾವ್ಕಾರ್, ಸುರೇಖಾ ಅರುಣ್ ಬೊಂಗಾಳೆ, ಮುಕ್ತಾ ಬೊಂಗಾಳೆ, ಅರುಣಾ, ಮಂಜುಳಾ, ರೂಪಾ, ಸಾಕಮ್ಮ, ನಿರ್ಮಲ ದುರುಗೋಜಿ, ಶೋಭಾ, ರತ್ನ ಮಹೇಂದ್ರಕರ್ ಇತರರು ಹಾಜರಿದ್ದರು.