ಜಗಳೂರಿನಲ್ಲಿ ಇಂದಿನಿಂದ ಮೂರು ದಿನ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮಕ್ಕೆ ಝಗಮಗಿಸುತ್ತಾ ಜಗಳೂರು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಪಟ್ಟಣದ ಬಯಲು ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೊದಲನೇ ದಿನದಂದು ಸಾಹಿತಿ ಎ.ಬಿ. ರಾಮಚಂದ್ರಪ್ಪ ಅವರ ಸಮ್ಮೇಳನದ ಸರ್ವಾಧ್ಯಕ್ಷರ ನೇತೃತ್ವದಲ್ಲಿ 14 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರ, ನಾಡ ಧ್ವಜಗಳ ಧ್ವಜಾರೋಹಣ, 9 ಗಂಟೆಗೆ ಮೆರವಣಿಗೆ ಬೆಳ್ಳಿ ರಥದ ಮೂಲಕ 100 ಡೊಳ್ಳು, ಹಲಗೆ, ಕಹಳೆ, ವಾದ್ಯವೃಂದಗಳು, 10 ಕಲಾತಂಡಗಳಳು ಭಾಗವಹಿಸಲಿವೆ.
ಕುಂಭಮೇಳ ತಹಶೀಲ್ದಾರ್ ಕಛೇರಿ ಮುಖಾಂತರ, ಅಂಬೇಡ್ಕರ್ ವೃತ್ತದ ಮೂಲಕ ಮಹಾತ್ಮಗಾಂಧಿ ರಸ್ತೆ ಮುಖಾಂತರ ಬಯಲು ರಂಗಮಂದಿರ ತಲುಪಲಿದೆ.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನೆರವೇರಿಸಲಿದ್ದಾರೆ. 5000 ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕರ ಸಂಕಲ್ಪದಂತೆ ಕಾರ್ಯಕ್ರಮ ಯಶಸ್ವಿಗೊಳ್ಳಲಿದೆ. ಗೋಷ್ಠಿಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಹಿರಿಯ ಚಿಂತಕ ಬರಗೂರು ರಾಮಚಂದ್ರಪ್ಪ ಭಾಗವಹಿಸಲಿದ್ದಾರೆ .
ಶುಕ್ರವಾರ ಶಾಸಕ ಬಿ.ದೇವೇಂದ್ರಪ್ಪ ಅವರು ಸಜ್ಜುಗೊಳ್ಳುತ್ತಿರುವ ವೇದಿಕೆಯನ್ನು ವೀಕ್ಷಿಸಿದರು. ಸಂದರ್ಭದಲ್ಲಿ ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ,ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್, ಮುಖಂಡರಾದ ಮಹೇಶ್ವರಪ್ಪ, ಮಾಜಿ ಮಂಜಣ್ಣ, ಕಾಂತರಾಜ್, ಪ್ರಕಾಶ್ ರೆಡ್ಡಿ ಸೇರಿದಂತೆ ಇದ್ದರು.