ಮಲೇಬೆನ್ನೂರು, ಜ. 10- ಭಾನುವಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮಾಡಲಾಗಿದ್ದ ವಿಶೇಷ ಪೂಜೆ, ಅಲಂಕಾರ ಭಕ್ತರ ಗಮನ ಸೆಳೆಯಿತು. ದ್ವಿತೀಯ ಬಾರಿಗೆ ತಿರುಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನಾರಾಯಣಸ್ವಾಮಿಯ ದರ್ಶನ ಪಡೆದರು. ಸಂಜೆ ಗ್ರಾಮದಲ್ಲಿ ಶ್ರೀದೇವಿ ಭೂ ದೇವಿ ಹಾಗೂ ಶ್ರೀಮನ್ನಾರಾಯಣ ಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ಜರುಗಿತು. ಮಂಗಳೂರಿನ ಚಾಂಡಿಮೇಳ ಸೇರಿದಂತೆ ವಿವಿಧ ಕಲಾ ಮೇಳಗಳು ಉತ್ಸವಕ್ಕೆ ಮೆರಗು ತಂದವು.
January 11, 2025