ನಗರದಲ್ಲಿ ಇಂದಿನಿಂದ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ

ನಗರದಲ್ಲಿ ಇಂದಿನಿಂದ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ

ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿರುವ ಶ್ರೀ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ 11ನೇ ವರ್ಷದ ಜಾತ್ರಾ ಮಹೋತ್ಸವವನ್ನು ಇಂದಿನಿಂದ ಮೂರು ದಿನ  ಹಮ್ಮಿಕೊಳ್ಳಲಾಗಿದೆ.

ಹಂಪಿಯ ಹೇಮಕೂಟ ಗಾಯತ್ರಿ ಪೀಠದ ದೇವಾಂಗ ಜಗದ್ಗುರು ದಯಾನಂದ ಪುರಿ ಶ್ರೀಗಳ ಕೃಪಾ ಆಶೀರ್ವಾದದೊಂದಿಗೆ ಈ ಜಾತ್ರಾ ಮಹೋತ್ಸವ ಜರುಗಲಿದ್ದು, ಇಂದು ಬೆಳಗ್ಗೆ 8.30ಕ್ಕೆ ನಂದಿ ಧ್ವಜಾರೋಹಣ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ. ನಾಳೆ ಭಾನುವಾರ ಬೆಳಗ್ಗೆ 7.30ಕ್ಕೆ ಗಂಗಾ ಪೂಜೆ, ಬೆಳಗ್ಗೆ 10.30ಕ್ಕೆ ಶ್ರೀ ಶಾಖಾಂಬರಿ ವ್ರತ, ವಿಶೇಷ ತರಕಾರಿ ಅಲಂಕಾರ ನೆರವೇರಲಿದೆ. 

ದಿನಾಂಕ 13 ರ ಸೋಮವಾರ ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.30 ರಿಂದ 11.30 ರವರೆಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಶ್ರೀ ಬನಶಂಕರಿ ದೇವಿಯ ಮೆರವಣಿಗೆ ನಿಟ್ಟುವಳ್ಳಿಯ ರಾಜ ಬೀದಿಗಳಲ್ಲಿ ಸಾಗಲಿದೆ.

error: Content is protected !!