ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ

ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ

ಹರಿಹರ ವಿಚಾರ ಸಂಕಿರಣ ಸಮಾರೋಪದಲ್ಲಿ ಗುಲ್ಬರ್ಗಾ ವಿವಿ  ಪ್ರೊ.ಮಹಾಬಲೇಶ್ವರ ಅಭಿಮತ

ಹರಿಹರ, ಜ.8- ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ ಯಾಗಿದ್ದು, ಇತಿಹಾಸ ಎಂಬುದು ಮಾನವನ ಎಲ್ಲಾ ಬಗೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಅಧ್ಯಯನದ ಅಂಗವಾಗಿದೆ  ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ  ಡಾ.ಬಿ.ಸಿ.ಮಹಾಬಲೇಶ್ವರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಜರುಗಿದ `ವಸಾಹತು ಕಾಲದಲ್ಲಿನ ಮಧ್ಯಕರ್ನಾಟದ ಚರಿತ್ರೆ ಮತ್ತು ದಾಖಲೆಗಳು’ ಎಂಬ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಭಾಷಣದಲ್ಲಿ ಅವರು ಮಾತನಾಡಿದರು. 

ಜನಸಾಮಾನ್ಯರಿಗೆ ಜಗತ್ತಿನ ಎಲ್ಲಾ ಸಾಮಾನ್ಯ ಸತ್ಯಗಳು ತಿಳಿಯಬೇಕಾದರೆ ನಾಗರಿಕ ಸಮಾಜ ದಲ್ಲಿನ ಪ್ರತಿಯೊಂದು ಕ್ಷೇತ್ರದ ಪ್ರತೀ ಚಟುವಟಿಕೆ ಹಾಗೂ ಘಟನಾವಳಿಗಳು ಸ್ಥಳ, ಸಮಯದೊಂದಿಗೆ  ದಾಖಲಾಗಬೇಕು. ಇದನ್ನೇ ನಾವು ಇತಿಹಾಸ ಎನ್ನುವುದು. ಧರ್ಮ ಪ್ರಚಾರ, ಪ್ರಾದೇಶಿಕ ಸಾಂಸ್ಕೃತಿಕ ಉಳಿವು, ಭಾಷಾ ಸೊಗಡಿನ ಸ್ವಾದವನ್ನು ಉಳಿಸುವ ಜೊತೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ. ಅಮೆರಿಕಾ ವ್ಯಕ್ತಿ ಸಂಸ್ಕೃತಿಯನ್ನು ಹೊಂದಿದ್ದರೆ, ಭಾರತ ಜೀವ ಸಂಸ್ಕೃತಿಯನ್ನು ಹೊಂದಿದೆ. ಹೀಗೆ ಜಗತ್ತಿನ ಪ್ರತಿಯೊಂದು ದೇಶವೂ ಭಿನ್ನವಾದ ಸಂಸ್ಕೃತಿ ವಿಶೇಷತೆಯನ್ನು ಇತಿಹಾಸ ದಾಖಲಿ ಸುತ್ತದೆ ಎಂದು ವಿವರಿಸಿದರು.      

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶು ಪಾಲ  ಡಾ.ಹೆಚ್.ವಿರುಪಾಕ್ಷಪ್ಪ ಅವರು ಮಾತನಾಡಿ ದರು. ಕಾಲೇಜಿನ ಐ.ಕ್ಯೂ.ಎಸ್.ಸಿ ಸಂಯೋಜಕ  ಡಾ. ಹೆಚ್.ಸಿ ಅನಂತನಾಗ್,  ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಮೇಶ್, ಇತಿಹಾಸದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಸವರಾಜಯ್ಯ, ಡಾ.ಬಿ.ಪಿ.ಕುಮಾರ್, ಪ್ರೊ.ಜಿ.ಎಂ.ಮುರುಗಿಸ್ವಾಮಿ, ಪ್ರೊ.ಅಣ್ಣಪ್ಪ ಅವರುಗಳು ಮಾತನಾಡಿದರು.  ಗಣಿತ ಶಾಸ್ತ್ರ ವಿಭಾಗದ  ಮುಖ್ಯಸ್ಥ  ಡಾ.ಯೋಗಿಶ್, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ  ಡಾ.ಟಿ.ಎಸ್.ತಿರುಮಲೇಶ, ದೈಹಿಕ ಶಿಕ್ಷಣ  ನಿರ್ದೇಶಕ  ಡಾ.ಚಂದ್ರಶೇಖರ್, ವಿಚಾರ ಸಂಕಿರಣದ ಸಹ ಸಂಯೋಜಕ  ಜೆ.ವಿ.ಮಲ್ಲಿಕಾರ್ಜುನ ಜವಳಿ  ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮಕ್ಕೂ ಮೊದಲು ಜರುಗಿದ ಮೂರನೇ ಗೋಷ್ಠಿಯಲ್ಲಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರಾಜಕುಮಾರ್.ಎಂ   ಅಧ್ಯಕ್ಷತೆಯಲ್ಲಿ, ಎ.ಆರ್.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಡಾ.ರಾಕೇಶ್.ಬಿ.ಸಿ ಅವರು `ಮಧ್ಯ ಕರ್ನಾಟಕದ ಮಠಗಳ ಕೊಡುಗೆ’ ಎಂಬ ವಿಷಯದಲ್ಲಿ ಪತ್ರಿಕೆ ಮಂಡಿಸಿದರು.

ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು. ಉಪನ್ಯಾಸಕ  ಎ.ರಾಜಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ.ಹೆಚ್.ತಿಪ್ಪೇಸ್ವಾಮಿ  ಸ್ವಾಗತಿಸಿದರು. ಇತಿಹಾಸ ವಿಭಾಗದ ಅಧ್ಯಾಪಕ ಹೆಚ್.ಪಿ  ಷಣ್ಮುಖಪ್ಪ  ವಂದಿಸಿದರು.

error: Content is protected !!