ಮಲೇಬೆನ್ನೂರು, ಜ. 8- ಯಲವಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ. ಬಸವನಗೌಡ ಮತ್ತು ಉಪಾಧ್ಯಕ್ಷರಾಗಿ ಖಲಂದರ್ ಸಾಬ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾದ ಜಿ. ಬಸಪ್ಪ ಮೇಷ್ಟ್ರು, ಡಿ. ಚಂದ್ರಪ್ಪ ಡಿ. ರಾಮಚಂದ್ರಪ್ಪ, ಎ. ಲಕ್ಷ್ಮೀಕಾಂತ್, ಎಲ್. ಕುಮಾರ್‌ನಾಯ್ಕ, ಬೂದೇರ ಹನುಮಂತಪ್ಪ, ಕಿಶೋರ್ ನಾಯ್ಕ, ಶ್ರೀಮತಿ ದಾಕ್ಷಾಯಣಮ್ಮ, ವೈ.ಕೆ. ಹನುಮಂತಪ್ಪ, ಶ್ರೀಮತಿ ಕಲ್ಲಮ್ಮ ಕೆ.ನಾರಾಯಣಪ್ಪ, ಶ್ರೀಮತಿ ರೂಪಾ ಹೆಚ್.ಸಿ. ಹನುಮಂತಪ್ಪ ಮತ್ತು ಗ್ರಾಮದ ಮುಖಂಡರಾದ ಡಿ. ಯೋಮಕೇಶ್ವರಪ್ಪ, ಜಿ. ಆಂಜನೇಯ, ಕೆ. ನರಸಪ್ಪ, ಡಿ.ಹೆಚ್. ಚನ್ನಬಸಪ್ಪ, ಎ. ರಾಮಚಂದ್ರಪ್ಪ, ಬಿ. ಸಿದ್ದೇಶ್, ಟಿ. ಹನುಮಂತಪ್ಪ, ಎಂ. ಮರುಳಯ್ಯ, ಎ. ಸುರೇಶ್, ಮಹ್ಮದ್ ಷರೀಫ್, ಹೆಚ್. ಶಾಂತವೀರಪ್ಪ, ನಿವೃತ್ತ ಯೋಧ ಶಿವಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದು, ಅವಿರೋಧ ಆಯ್ಕೆಗೆ ಸಹಕರಿಸಿದರು.
ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು ಚುನಾವಣಾಧಿಕಾರಿಯಾಗಿದ್ದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.