ಮಲೇಬೆನ್ನೂರು, ಜ. 8 – ಭಾನುವಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ದ್ವಿತೀಯ ಬಾರಿಗೆ ತಿರುಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6 ಗಂಟೆಯಿಂದ ಗ್ರಾಮದಲ್ಲಿ ಶ್ರೀ ದೇವಿ ಭೂ ದೇವಿ ಹಾಗೂ ಶ್ರೀಮನ್ನಾರಾಯಣ ಸ್ವಾಮೀಯ ಪಲ್ಲಕ್ಕಿ ಉತ್ಸವ ಚಾಂಡಿ ಮೇಳ ಸೇರಿದಂತೆ ವಿವಿಧ ಕಲಾಮೇಳಗಳೊಂದಿಗೆ ನಡೆಯಲಿದೆ.
January 9, 2025