ದಾವಣಗೆರೆ, ಜ. 8- ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಓದಿನಲ್ಲಿ ನೆನಪಿನ ಶಕ್ತಿ ಹೆಚ್ಚಾಗಲು, ಓದಿದ್ದನ್ನು ಟಿಪ್ಪಣಿಯ ರೂಪದಲ್ಲಿ ಬರೆದಿಟ್ಟುಕೊಳ್ಳುವುದರಿಂದ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ಉತ್ತಮ ಅಂಕ ಗಳಿಸಲು ಸಾಧ್ಯವೆಂದು ಡಾ. ವಿವೇಕಾನಂದ ಜಿ. ತಿಳಿಸಿದರು.
ಅವರು ನಗರದ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕೌಶಲ್ಯ ಆಧಾರಿತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಥಣಿ ಪಿಯು ಕಾಲೇಜು ಪ್ರಾಂಶುಪಾಲರು, ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು, ಅಥಣಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಎಸ್.ಬಿ.ಸಿ. ಪ್ರಾಂಶುಪಾಲ ಡಾ. ಷಣ್ಮುಖಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ಶ್ವೇತಾ ಪ್ರಾರ್ಥಿಸಿದರು. ಸಹನಾ, ಅನ್ಯನ್ಯಾ ನಿರೂಪಿಸಿದರು. ಕುಸುಮ ವಂದಿಸಿದರು.