ಜಿಗಳಿ : ಸರ್ಕಾರಿ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಗುದ್ಧಲಿ ಪೂಜೆ

ಜಿಗಳಿ : ಸರ್ಕಾರಿ ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಗುದ್ಧಲಿ ಪೂಜೆ

ಮಲೇಬೆನ್ನೂರು, ಜ. 8 – ಜಿಗಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕಾಲಿನ್ಸ್‌ ಏರೋ ಸ್ಪೇಸ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಬುಧವಾರ ಗುದ್ಧಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಗ್ರಾಮದ ಮುದೇನೂರು ಹಾಲೇಶ್‌, ಮುದೇನೂರು ಧರ್ಮಪ್ಪ, ಮುದೇನೂರು ಗದಿಗೆಪ್ಪ, ಗ್ರಾ.ಪಂ. ಸದಸ್ಯ ಚೇತನ್‌ ಮತ್ತು ಮಧು ಇವರುಗಳ ಸಹಕಾರದಿಂದ ಈ ಹೈಟೆಕ್‌ ಶೌಚಾಲಯ ನಮ್ಮ ಶಾಲೆಗೆ ಮಂಜೂರಾಗಿದೆ ಎಂದು ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಲಿಂಗರಾಜ್‌ ತಿಳಿಸಿದರು. 

ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್‌, ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜಿ.ಪಿ. ಹನುಮಗೌಡ, ಬಿ ಪ್ರಭಾಕರ್‌, ವಿಜಯಭಾಸ್ಕರ್‌ ಮತ್ತು ಎಸ್‌ಡಿಎಂಸಿ ಮಹಿಳಾ ಸದಸ್ಯರು ಹಾಗೂ ಶಿಕ್ಷಕರಾದ ಮಲ್ಲಿಕಾರ್ಜುನ್‌, ಲೋಕೇಶ್‌ ಗುಡ್ಡಪ್ಪ, ಶ್ರೀನಿವಾಸ್‌ ರೆಡ್ಡಿ, ಜಯಶ್ರೀ, ಕರಿಬಸಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!