ರಾಷ್ಟ್ರೀಯ ಯುವಜನೋತ್ಸವ : ಅಶ್ವಿನಿ ಆಯ್ಕೆ

ರಾಷ್ಟ್ರೀಯ ಯುವಜನೋತ್ಸವ : ಅಶ್ವಿನಿ ಆಯ್ಕೆ

ದಾವಣಗೆರೆ, ಜ.8- ನಗರದ ಎ.ವಿ.ಕೆ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಬಾಯಿ ಅವರು ದೆಹಲಿಯಲ್ಲಿ ಇದೇ ದಿನಾಂಕ 11 ಮತ್ತು 12ರಂದು ನಡೆಯಲಿರುವ `ವಿಕಸಿತ್‌ ಭಾರತ್‌ ಯಂಗ್‌ ಲೀಡರ್ಸ್‌ ಡೈಲಾಗ್‌’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದು, ರಾಷ್ಟ್ರೀಯ ಯುವಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸುವರು. ಇವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಲಿದ್ದಾರೆ. 

error: Content is protected !!