ಹರಿಹರ, ಜ.8- ತುಂಗಭದ್ರಾ ನದಿಯಲ್ಲಿನ ನೀರು ಬಹಳಷ್ಟು ಕಡಿಮೆಯಾ ಗಿರುವ ಕಾರಣ, ನದಿ ತಳದಲ್ಲಿ ನಗ-ನಾಣ್ಯ ಬೆದಕುವ ತಂಡವೊಂದು ಕಂಡುಬಂದಿದೆ. ತಮಿಳುನಾಡಿನ ತಿರುವಣಮಲೈ ಗ್ರಾಮದ ಭೂಪತಿ, ರತ್ನವೇಲು, ಶರವಣನ್, ಮಧುವೇಲು ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಜನರಿರುವ ಈ ತಂಡ ಕಣ್ಣಿಗೆ ರಕ್ಷಾ ಕವಚ ತೊಟ್ಟು ನದಿಯಲ್ಲಿ ಹಣ ಆಭರಣಗಳನ್ನು ಹುಡುಕತೊಡಗಿತ್ತು. ನದಿ ತುಂಬಿದಾಗ ಸಾರ್ವಜನಿಕರು ಪೂಜೆ ಸಲ್ಲಿಸಿ ಹಣ, ಆಭರಣವನ್ನು ನದಿಗೆ ಹಾಕುವುದು ಸಂಪ್ರದಾಯ. ಹಾಗಾಗಿ ಅದನ್ನು ಸಂಗ್ರಹಿಸಲು ಈ ತಂಡವು ಕುಟುಂಬದ ಜೊತೆಗೆ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಇಲ್ಲಿಗೆ ಕರೆ ತಂದಿದೆ.
ನದಿಯಲ್ಲಿ ನಗ-ನಾಣ್ಯ ಬೆದಕುವ ತಂಡ.!
