ಚನ್ನಗಿರಿ, ಜ. 8 – ತಾಲ್ಲೂಕಿನ ಶ್ರೀ ವೆಂಕಟೇಶ್ವರ ಪುರದಲ್ಲಿ ಶ್ರೀ ದೇವಿ, ಭೂದೇವಿ ಸಹಿತ ಶ್ರೀ ವೆಂಕಟೇಶ್ವರ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಧನುರ್ಮಾಸದ ಶುಕ್ಲ ಪಕ್ಷ ವೈಕುಂಠ ಏಕಾದಶಿಯಂದು ನಾಡಿದ್ದು ದಿನಾಂಕ 10ರ ಶುಕ್ರವಾರ ಬೆಳಗಿನ ಜಾವ 3.30 ರಿಂದ ಉತ್ತರ ದ್ವಾರ ದರ್ಶನ, ವಿಶೇಷ ಪಂಚಾಮೃತ ಅಭಿಷೇಕ, ದಿವ್ಯ ವಜ್ರ ಖಚಿತ ಆಭರಣ ಅಲಂಕಾರ ಸೇವೆಯನ್ನು ನಡೆಸಲಾಗುತ್ತದೆ. ಬೆಳಿಗ್ಗೆ 8ರಿಂದ ಸಂಜೆ 8 ರವರೆಗೂ ನಿರಂತರವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಅರ್ಚಕ ಅಪ್ಪಾಜಿ ವರಪ್ರಸಾದ್ ಶರ್ಮ ತಿಳಿಸಿದ್ದಾರೆ.
ವೆಂಕಟೇಶ್ವರಪುರದಲ್ಲಿ ವೈಕುಂಠ ಏಕಾದಶಿ
