ಮುಕ್ತಿ-ಧಾಮದ ಅಭಿವೃದ್ಧಿಗಾಗಿ ದಾನಿಗಳು ಮುಂದೆ ಬನ್ನಿ

ಮುಕ್ತಿ-ಧಾಮದ ಅಭಿವೃದ್ಧಿಗಾಗಿ ದಾನಿಗಳು ಮುಂದೆ ಬನ್ನಿ

ಭರಮಸಾಗರ, ಜ.8- ಇಲ್ಲಿನ ಮುಕ್ತಿ-ಧಾಮದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ ಹೊಂದಿದ ದಾನಿಗಳು ದಾನದ ರೂಪದಲ್ಲಿ ಹಣ ಸಹಾಯ ಮಾಡಬಹುದಾಗಿದೆ.

ಪ್ರಸ್ತುತ ಈ ಮುಕ್ತಿ-ಧಾಮವನ್ನು ಬ್ರಾಹ್ಮಣರು, ವೈಶ್ಯರು, ವಿಶ್ವಕರ್ಮ, ಲಂಬಾಣಿ, ಮಾರ್ವಾಡಿ ಹಾಗೂ ದರ್ಜೆಯರು ಬಳಕೆ ಮಾಡಿಕೊಳ್ಳುತ್ತಿದ್ದು, ಇಲ್ಲಿ ಸುತ್ತಲೂ ಕಾಂಪೌಂಡ್, ಕಟ್ಟಿಗೆ ಕೊಠಡಿ, ನೀರಿನ ಸೌಕರ್ಯ, ನೆಲಕ್ಕೆ ಹಾಸು ಬಂಡೆ ಹಾಗೂ ಕುಳಿತುಕೊಳ್ಳಲು ಬೆಂಚು ಹಾಕಲು ಹಣದ ಅವಶ್ಯಕತೆ ಇರುವುದರಿಂದ ದಾನಿಗಳ ಸಹಾಯ ಬೇಕಾಗಿದೆ. ಈತನಕ ಮುಕ್ತಿಧಾಮದ ಅಭಿವೃದ್ಧಿಗಾಗಿ ಸ್ಥಳೀಯ ಸಂಸದರು ಹಾಗೂ ಶಾಸಕರಲ್ಲಿ ಮೂರ್ನಾಲ್ಕು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಇಂದು ದಾನಿಗಳೇ ಜನಪ್ರತಿನಿಧಿಗಳಿಗೆ ತಲೆ ತಗ್ಗಿಸುವ ಕಾರ್ಯ ಮಾಡಬೇಕಿದೆ.

25 ಸಾವಿರಕ್ಕೂ ಅಧಿಕ ಹಣ ನೀಡಿದವರ ಹೆಸರನ್ನು ನಾಮ ಫಲಕದಲ್ಲಿ ಹಾಕಿಸಲಾಗುವುದು. ದಾನಿಗಳು 0483101016738 ಈ ಕೆನರಾ ಬ್ಯಾಂಕಿನ ಖಾತೆಗೆ ಹಣ ಹಾಕಬಹುದು. ಮಾಹಿತಿಗಾಗಿ 9964891029 ಸಂಪರ್ಕಿಸಿ.

error: Content is protected !!