ದಾವಣಗೆರೆ, ಜ.8- ಸಮೀಪದ ಆವರಗೆರೆ ಗ್ರಾಮದ ಚಿಂದೋಡಿ ಲೀಲಾ ಕಲಾ ಭವನದಲ್ಲಿ ಭಾನು ವಾರ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ 2001ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ `ಗುರು ವಂದನಾ’ ಹಾಗೂ `ಸ್ನೇಹ ಸಮ್ಮಿಲನ’ ಕಾರ್ಯಕ್ರಮ ನಡೆಯಿತು.
ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿಗಳು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ನೆನಪುಗಳನ್ನು ವಿನಿಮಯ ಮಾಡಿಕೊಂಡರು.
ಈ ವೇಳೆ ಹಳೇ ವಿದ್ಯಾರ್ಥಿಗಳಾದ ರಮೇಶ್ ಎನ್, ಕರಿಬಸಪ್ಪ.ಪಿ,ಪ್ರಶಾಂತ, ಕರಿಬಸಪ್ಪ.ಜಿ, ಹೇಮಗಿರಿ, ಕುಮಾರ ನಾಯ್ಕ, ಕರಿಬಸಪ್ಪ .ಸಿ, ಮಲ್ಲೇಶ್.ಇ, ಬಸವರಾಜ.ಹೆಚ್, ವಿನಯ್ ಕುಮಾರ್ .ಸಿ, ಮಲ್ಲಿಕಾರ್ಜುನ .ಸಿ.ಪಿ, ಪ್ರಸನ್ನ ಕುಮಾರ್, ರೇಖಾ, ಸುಧಾ, ಡಿ.ಕೆ.ಉಷಾ, ರಂಜಿತಾ ಹಾಗೂ ಶಾಲೆಯ ಹಳೇಯ ಶಿಕ್ಷಕರು ಹಾಗೂ ಹಾಲಿ ಶಿಕ್ಷಕರು ಇದ್ದರು.