ವಿಕಸಿತ ಭಾರತ ಯಂಗ್ ಲೀಡರ್‌ ಡೈಲಾಗ್ ಚಾಂಪಿಯನ್‌ಶಿಪ್‌ಗೆ ಜಿ. ರೇವತಿ ಆಯ್ಕೆ

ವಿಕಸಿತ ಭಾರತ ಯಂಗ್ ಲೀಡರ್‌ ಡೈಲಾಗ್ ಚಾಂಪಿಯನ್‌ಶಿಪ್‌ಗೆ ಜಿ. ರೇವತಿ ಆಯ್ಕೆ

ದಾವಣಗೆರೆ, ಜ.  7 – ನಗರದ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಜಿ. ರೇವತಿ ಅವರು  ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ಆಯ್ಕೆಯಾಗಿರುವ ವಿದ್ಯಾರ್ಥಿಗಳಲ್ಲೊಬ್ಬರಾಗಿ  ಮಾನ್ಯತೆ ಪಡೆದಿದ್ದಾರೆ.

ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಯುವಕೋಶ ಇಲಾಖೆಯು ಆಯೋಜಿಸಿದ್ದು, ಇದೇ ದಿನಾಂಕ 11 ಮತ್ತು 12ರಂದು ನವದೆಹಲಿಯ ಭಾರತ್ ಮಂಡಪಂ ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರೇವತಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಾದಿಸಲು ಅಪರೂಪದ ಅವಕಾಶ ದೊರೆತಿದೆ.

error: Content is protected !!