ಸಿದ್ದೇಶ್ವರ ಬ್ಯಾಂಕ್: 27 ವರ್ಷಗಳ ನಂತರ ಮೊದಲ ಚುನಾವಣೆ; ಅರಕೇರಿ ಗುಂಪಿಗೆ ಜಯ

ಸಿದ್ದೇಶ್ವರ ಬ್ಯಾಂಕ್: 27 ವರ್ಷಗಳ ನಂತರ ಮೊದಲ ಚುನಾವಣೆ; ಅರಕೇರಿ ಗುಂಪಿಗೆ ಜಯ

ರಾಣೇಬೆನ್ನೂರು,ಜ.6-  ಹುಟ್ಟಿ 27 ವರ್ಷಗಳಾದರೂ ಯಾವುದೇ ಭಿನ್ನಮತ ಬರದೇ ಪ್ರತಿ ಬಾರಿಯೂ ಅವಿರೋಧವಾಗಿಯೇ ಆಡಳಿತ ವಹಿಸಿಕೊಳ್ಳುತ್ತಿದ್ದ  ಪ್ರಸಿದ್ಧ ವರ್ತಕ, ಸಾಧು ಲಿಂಗಾಯತ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಶಣ್ಣ ಅರಕೇರಿ ಅವರ ತಂಡ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುವ ಮೂಲಕ ಶ್ರೀ ಸಿದ್ದೇಶ್ವರ ಕೋ- ಆಪ್ ಬ್ಯಾಂಕಿನ ಆಡಳಿತವನ್ನು ಮತ್ತೆ ವಹಿಸಿಕೊಂಡಿತು.

ಒಟ್ಟು 13 ಸ್ಥಾನಗಳಲ್ಲಿ  ನಗರಸಭೆ ಸದಸ್ಯೆ ಗಂಗಮ್ಮ ಹಾವನೂರ, ಬಾಗಲರ ಭರಮಪ್ಪ, ಅಜ್ಜಪ್ಪ ತಳವಾರ ಹಾಗೂ ಬಸವರಾಜ ಕೆಂಡದಮಠ ಈ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾ ಕಣದಲ್ಲಿದ್ದ 15 ಅಭ್ಯರ್ಥಿಗಳಲ್ಲಿ ಅರಕೇರಿ ತಂಡದ 9 ಅಭ್ಯರ್ಥಿಗಳು ಬಹುಮತ ಪಡೆದು ಆಯ್ಕೆಯಾದರು.

ಎದುರಾಳಿಯಾಗಿದ್ದ ಪಾಟೀಲ ಗುಂಪಿನ ಆರು ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಸಹಕಾರಿ ಇಲಾಖೆಯ ಉಪನಿಬಂಧಕ ವಿಕ್ರಮ ಜಿ. ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 

ಮಲ್ಲೇಶಣ್ಣ ಅರಕೇರಿ, ರವಿ ಕರ್ಜಗಿ, ಪರಮೇಶಪ್ಪ ಹೊಟ್ಟಿಗೌಡ್ರ, ಸುಧಾ ಹೊನ್ನಾಳಿ, ವನಜಾಕ್ಷಿ ಗಂಗನಗೌಡ್ರ, ಪರಮೇಶ
ಗೂಳಣ್ಣನವರ, ಚನ್ನಬಸಪ್ಪ ಕಲ್ಯಾಣಿ, ಜೆಟ್ಟೆಪ್ಪ ಕರೇಗೌಡ್ರ, ಬೂದೆಪ್ಪ ಬುರಡಿಕಟ್ಟಿ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

error: Content is protected !!