ದಾವಣಗೆರೆ, ಜ.6- ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೊರೆಗಾಂವ್ ಯುದ್ದದಲ್ಲಿ ಗೆದ್ದ ನಿಮಿತ್ತ ವಿಜಯೋತ್ಸವ ಆಚರಿಸಲಾಯಿತು. ಇಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚುವ ಮೂಲಕ 206ನೇ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಡಿಎಸ್‌ಎಸ್‌ನ ಹೆಗ್ಗೆರೆ ರಂಗಪ್ಪ ಮತ್ತು ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್ ಅವರು ಕೊರೆಗಾಂವ್ ಯುದ್ಧದ ಬಗ್ಗೆ ಮಾತನಾಡಿದರು.
ವಿಜಯೋತ್ಸವದಲ್ಲಿ ಒಕ್ಕೂಟದ ಹೆಚ್. ಮಲ್ಲೇಶ್ ಹರಿಹರ, ಜಿಗಳಿ ಹಾಲೇಶ್, ಪುರದಾಳ್ ಪರಮೇಶ್, ಎಲ್.ಜಯಣ್ಣ, ಬಾತಿ ಸಿದ್ದೇಶ್, ಶಶಿಧರ್ ಶಿರಮಗೊಂಡನಹಳ್ಳಿ, ಮಲ್ಲೇಶ್ ಚಿಕ್ಕನಹಳ್ಳಿ, ಐರಣಿ ಚಂದ್ರು, ನಿಟ್ಟುವಳ್ಳಿ ಉಮೇಶ್, ನಿಟುವಳ್ಳಿ, ನಿಂಗರಾಜ್ ಶಿರಮಗೊಂಡನಹಳ್ಳಿ, ನಾಗರಾಜ್ ಚಿಕ್ಕನಹಳ್ಳಿ, ರಾಮನಗರ ನಿಂಗಪ್ಪ, ತಿಪ್ಪೇರುದ್ರಪ್ಪ, ನಾಗೇಶ್, ಮೇಗಳಗೆರೆ ಮಂಜು, ಹೆಚ್.ಸಿ.ಮಲ್ಲಪ್ಪ, ಬಿ.ಹನುಮಂತಪ್ಪ ಇತರರು ಇದ್ದರು.