ಗೋವಾದಲ್ಲಿ ಯೋಗಾಸನ ಸ್ಪರ್ಧೆ : ಪ್ರಶಸ್ತಿ

ಗೋವಾದಲ್ಲಿ ಯೋಗಾಸನ ಸ್ಪರ್ಧೆ : ಪ್ರಶಸ್ತಿ

ದಾವಣಗೆರೆ, ಜ. 6 – ಪತಂಜಲಿ ಕಾಲೇಜ್ ಆಫ್ ಯೋಗ ಅಂಡ್ ರಿಸರ್ಚ್ ಸೆಂಟರ್ ತಮಿಳುನಾಡು, ನ್ಯಾಷ ನಲ್ ಯೋಗ ಅಸೋಸಿಯೇಷನ್ ಆಫ್ ಇಂಡಿ ಯಾದ ಆಶ್ರಯದಲ್ಲಿ ಗೋವಾದ ಫಿಟ್ನೆಸ್ ಸ್ಟುಡಿಯೋ ಓಪನ್ ಪಾರ್ಕ್‌ನಲ್ಲಿ ನಡೆದ ಆಲ್ ಇಂಡಿಯಾ ಯೋಗಾಸನ ಚಾಂಪಿಯನ್ ಶಿಪ್‌ನಲ್ಲಿ ನಗರದ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

12 ವರ್ಷದ ವಯೋಮಿತಿ ವಿಭಾಗದಲ್ಲಿ ಕುಮಾರಿ ಅನುಷ್ಕಾ ಮಲ್ನಾಡ್ ಇವರು ಗೋಲ್ಡ್÷ ಮೆಡಲ್ ಪಡೆಯುವುದರೊಂದಿಗೆ ಓವರ್ ಆಲ್ ಚಾಂಪಿಯನ್ ಆಫ್ ಚಾಂಪಿಯನ್ ಆಗಿದ್ದಾರೆ. 60 ವರ್ಷದ ವಿಭಾಗದಲ್ಲಿ ರಾಜಶೇಖರ್ ಎಸ್, ಪ್ರಥಮ ಸ್ಥಾನ, 35 ರಿಂದ 40 ವರ್ಷದ ವಿಭಾಗದಲ್ಲಿ ರಾಘವೇಂದ್ರ ಚೌವ್ಹಾಣ್ ದ್ವಿತೀಯ ಸ್ಥಾನ 40 ರಿಂದ 50 ವರ್ಷದ ವಿಭಾಗದಲ್ಲಿ ಚಂದ್ರಶೇಖರ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ 40 ರಿಂದ 50 ವರ್ಷದ ವಿಭಾಗದಲ್ಲಿ ರೇಖಾ.ಜೆ ಪ್ರಥಮ ಸ್ಥಾನ, 35 ರಿಂದ 40 ವರ್ಷದ ವಿಭಾಗದಲ್ಲಿ ವಾಣಿಶ್ರೀ ಪ್ರಥಮ ಸ್ಥಾನ, ಸರಸ್ವತಿ ದ್ವಿತೀಯ ಸ್ಥಾನ, 25 ರಿಂದ 35 ವಯೋಮಿತಿಯಲ್ಲಿ ಲಾವಣ್ಯ ಎಸ್.ಪಿ., ಪ್ರಥಮ ಸ್ಥಾನ, ಶ್ರೀಮತಿ ಶೃತಿ ದ್ವಿತೀಯ ಸ್ಥಾನ, ಚೈತ್ರ ತೃತೀಯ ಸ್ಥಾನ ಪಡೆದಿದ್ದಾರೆ.

12 ರಿಂದ 15 ರ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಅಜಯ್ ಪ್ರಥಮ ಸ್ಥಾನ, ದೀಕ್ಷಿತ್ ದ್ವಿತೀಯ ಸ್ಥಾನ ಪಡೆಯುವುದಿದ್ದಾರೆ.

ಪ್ರಶಸ್ತಿಗೆ ಭಾಜನರಾದ ಯೋಗ ವಿದ್ಯಾರ್ಥಿಗಳಿಗೆ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ, ಯೋಗಾಚಾರ್ಯ ಎನ್. ಪರಶುರಾಮ್,  ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್, ದಾವಣಗೆರೆ ಎಸ್‌ಎಎಸ್‌ಎಸ್ ಯೋಗ ಫೆಡರೇಷನ್ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಗೋಪಾಲ್‌ರಾವ್, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಅಜ್ಜಯ್ಯ, ರಾಘವೇಂದ್ರ ಚೌವ್ಹಾಣ್, ರಂಗಪ್ಪ, ನಾಗರಾಜ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ ಅಭಿನಂದಿಸಿದ್ದಾರೆ.

error: Content is protected !!