ಉಪನ್ಯಾಸಕರ ವಜಾ ಆದೇಶ ಹಿಂಪಡೆಯಲು ಎಐಡಿಎಸ್ಓ ಒತ್ತಾಯ

ಉಪನ್ಯಾಸಕರ ವಜಾ ಆದೇಶ ಹಿಂಪಡೆಯಲು ಎಐಡಿಎಸ್ಓ ಒತ್ತಾಯ

ದಾವಣಗೆರೆ, ಜ.6-  ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ಭಾರದ ಕೊರ ತೆಯ ಕಾರಣ ನೀಡಿ, ಉಪ ನ್ಯಾಸಕರನ್ನು ಕೆಲಸ ದಿಂದ ವಜಾಗೊಳಿಸು ವಂತೆ  ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ  ಆದೇಶ ಹೊರಡಿಸಿರುವುದನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸಿದೆ.

ವಿಷಯವಾರು 40 ಕ್ಕಿಂತ ಕಡಿಮೆ ವಿದ್ಯಾರ್ಥಿ ಗಳ ದಾಖಲಾತಿ ಹೊಂದಿರುವ ಉಪನ್ಯಾಸಕರನ್ನು ವಜಾ ಗೊಳಿಸಬೇಕಾಗಿ ಆದೇಶದಲ್ಲಿ ತಿಳಿಸಲಾಗಿ ದ್ದು,   ಕಳೆದ ಆರು ತಿಂಗಳಿನಿಂದ ಈ ಉಪನ್ಯಾಸಕರ ಸಂಬಳ ವನ್ನು ಕೂಡ ಸರ್ಕಾರವು ತಡೆಹಿಡಿದಿದೆ.  ಸರ್ಕಾರವು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೇ ಹೊರತು, ಉಪನ್ಯಾಸಕರನ್ನು ವಜಾ ಮಾಡುವುದಲ್ಲ. 

ರಾಜ್ಯದ 821 ಅನುದಾನಿತ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳಲ್ಲೂ ಕೂಡ ಕೆಲವು ವಿಷಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣ ನೀಡಿ ಈಗ ಉಪನ್ಯಾಸಕರನ್ನು ವಜಾಗೊಳಿಸಿದರೆ, ಉಪನ್ಯಾಸಕರ ಕೊರತೆಯಿಂದ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಕಡಿತಕೊಳ್ಳುತ್ತದೆ. 

ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆಯೇ, ಅಂತಿಮವಾಗಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳನ್ನು ಮುಚ್ಚುವ ಹುನ್ನಾರ ಇದಾಗಿದೆ ಎಂದು  ಎಐಡಿಎಸ್ಓ ಆರೋಪಿಸಿದೆ.

ಕೂಡಲೇ ಉಪನ್ಯಾಸಕರನ್ನು ವಜಾ ಮಾಡಿ ರುವ ಆದೇಶವನ್ನು ಸರ್ಕಾರವು ಹಿಂಪಡೆಯಬೇಕು ಮತ್ತು ಅವಶ್ಯಕ ಸೌಕರ್ಯಗಳನ್ನು ನೀಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸರ್ಕಾರವೇ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಓ   ಆಗ್ರಹ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್. ತಿಳಿಸಿದ್ದಾರೆ. 

error: Content is protected !!